ಶುಕ್ರವಾರ, ಆಗಸ್ಟ್ 23, 2019
21 °C
CDEL APPOINT EY

ಸಿಡಿಇಎಲ್‌: ಲೆಕ್ಕಪತ್ರತನಿಖೆಗೆ ‘ಇವೈ’ ನೇಮಕ

Published:
Updated:

ನವದೆಹಲಿ (ಪಿಟಿಐ): ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಸಿಡಿಇಎಲ್‌) ಮತ್ತು ಅದರ ಅಂಗ ಸಂಸ್ಥೆಗಳ ಹಣಕಾಸು ವ್ಯವಹಾರಗಳ ಸಮಗ್ರ ಪರಿಶೀಲನೆ ನಡೆಸಿ ವರದಿ ನೀಡಲು ಜಾಗತಿಕ ಲೆಕ್ಕಪತ್ರ ಸಂಸ್ಥೆ ಅರ್ನೆಸ್ಟ್‌ ಆ್ಯಂಡ್‌ ಯಂಗ್‌ (ಇವೈ) ನೇಮಕ ಮಾಡಲು ನಿರ್ಧರಿಸಲಾಗಿದೆ.

ಗುರುವಾರ ಸಭೆ ಸೇರಿದ್ದ ಕಂಪನಿಯ ನಿರ್ದೇಶಕ ಮಂಡಳಿಯು ಈ ನಿರ್ಧಾರ ಕೈಗೊಂಡಿದೆ. ಸಂಸ್ಥೆಯ ಸ್ಥಾಪಕರಾಗಿದ್ದ ವಿ. ಜಿ. ಸಿದ್ಧಾರ್ಥ ಅವರು ತಮ್ಮ ಸಾವಿಗೆ ಮುಂಚೆ ಬರೆದಿರುವರು ಎನ್ನಲಾದ ಪತ್ರದಲ್ಲಿ ಆದಾಯ ತೆರಿಗೆ ಇಲಾಖೆ ತಮಗೆ ಕಿರುಕುಳ ನೀಡಿತ್ತು ಎನ್ನುವುದರ ಸಾಂದರ್ಭಿಕ ಕಾರಣಗಳೇನು ಎನ್ನುವುದರ ಬಗ್ಗೆಯೂ ‘ಇವೈ’ ತನಿಖೆ ನಡೆಸಲಿದೆ.

‘ಸಿಡಿಇಎಲ್‌’ಗೆ ಕಾರ್ಪೊರೇಟ್‌ ಸಲಹೆ ನೀಡಲು ಪ್ರತಿಷ್ಠಿತ ಸಂಸ್ಥೆಯೊಂದನ್ನು ನೇಮಕ ಮಾಡಿಕೊಳ್ಳಲೂ ಮಂಡಳಿಯು ತೀರ್ಮಾನಿಸಿದೆ ಎಂದು ಸಂಸ್ಥೆಯು ಷೇರುಪೇಟೆಗೆ ಮಾಹಿತಿ ನೀಡಿದೆ.

Post Comments (+)