ಗುರುವಾರ , ಏಪ್ರಿಲ್ 2, 2020
19 °C
‘ಕೋವಿಡ್‌–19’ ಸೋಂಕು ತಗಲುವ ಗಾಳಿ ಸುದ್ದಿ ಪ್ರಭಾವ

ಕೋಳಿ ಮಾಂಸ ಮಾರಾಟ, ಬೆಲೆ ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ದೇಶದಲ್ಲಿ ಒಂದು ತಿಂಗಳಲ್ಲಿ ಕೋಳಿ ಮಾಂಸದ ಮಾರಾಟ ಮತ್ತು ಬೆಲೆ ಕ್ರಮವಾಗಿ ಶೇ 50 ಮತ್ತು ಶೇ 70ರಷ್ಟು ಕಡಿಮೆಯಾಗಿದೆ.

ಕೋಳಿ ಮಾಂಸ ಸೇವನೆಯಿಂದ ‘ಕೋವಿಡ್‌–19’ ಸೋಂಕು ತಗುಲಲಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿರುವುದರಿಂದ ಕುಕ್ಕುಟೋದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಕಂಡು ಬಂದಿದೆ ಎಂದು ಗೋದ್ರೆಜ್‌ ಅಗ್ರೊವೆಟ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ತನ್ನ ಕುಕ್ಕುಟೋಮ್ಯದ ಅಂಗಸಂಸ್ಥೆಯಾಗಿರುವ ಗೋದ್ರೆಜ್‌ ಟೈಸನ್‌ ಫುಡ್ಸ್‌ನ ವಹಿವಾಟು ಒಂದು ತಿಂಗಳಾವಧಿಯಲ್ಲಿ ಶೇ 40ರಷ್ಟು ಕಡಿಮೆಯಾಗಿದೆ. ಮುಂದಿನ 2 ರಿಂದ 3 ತಿಂಗಳಲ್ಲಿ ಗಾಳಿಸುದ್ದಿಗಳು ತಹಬಂದಿಗೆ ಬರುತ್ತಿದ್ದಂತೆ ಕೋಳಿ ಮಾಂಸದ ಬಳಕೆ ಹೆಚ್ಚಲಿದೆ. ಆಗ ದಿಢೀರನೆ ಬೆಲೆಯಲ್ಲಿ ಹೆಚ್ಚಳ ಕಂಡುಬರಲಿದೆ’ ಎಂದು ಗೋದ್ರೆಜ್‌ ಅಗ್ರೊವೆಟ್‌ನ ವ್ಯವಸ್ಥಾಪಕ ನಿರ್ದೇಶಕ ಬಿ. ಎಸ್‌. ಯಾದವ್‌ ಹೇಳಿದ್ದಾರೆ.

‘ಭಾರತದಲ್ಲಿನ ಕೋಳಿ ಮಾಂಸವು ಸೇವನೆಗೆ ಸುರಕ್ಷಿತವಾಗಿದೆ. ಕೋವಿಡ್‌–19 ವೈರಸ್‌ ಹಾವಳಿ ಬಗ್ಗೆ ಹಬ್ಬಿರುವ ಆಧಾರರಹಿತ ಗಾಳಿ ಸುದ್ದಿಗಳಿಂದಾಗಿ ಬೇಡಿಕೆ ಗಮನಾರ್ಹವಾಗಿ ಕುಸಿದಿದೆ. ಕೋಳಿಗಳ ಸಗಟು ಖರೀದಿ ದರ (ಎಕ್ಸ್‌ ಫಾರ್ಮ್‌ಗೇಟ್‌) ಶೇ 70ರಷ್ಟು ಕಡಿಮೆಯಾಗಿದೆ. ಒಟ್ಟಾರೆ ಕುಕ್ಕುಟೋದ್ಯಮ ಉದ್ದಿಮೆಯು ವಾಟ್ಸ್‌ಆ್ಯಪ್‌ನಲ್ಲಿ ಹಬ್ಬಿದ ಗಾಳಿ ಸುದ್ದಿಯಿಂದ ಬಾಧಿತವಾಗಿದೆ’ ಎಂದು ಹೇಳಿದ್ದಾರೆ.

ಅಂಕಿ ಅಂಶ

7.5 ಕೋಟಿ: ತಿಂಗಳ ಹಿಂದೆ ಪ್ರತಿ ವಾರ ಮಾರಾಟವಾಗುತ್ತಿದ್ದ ಕೋಳಿಗಳ ಸಂಖ್ಯೆ

3.5 ಕೋಟಿ: ಸದ್ಯಕ್ಕೆ ಮಾರಾಟವಾಗುತ್ತಿರುವ ಪ್ರತಿ ವಾರದ ಕೋಳಿಗಳ ಸಂಖ್ಯೆ

₹ 100 ರಿಂದ ₹ 35: ಕುಸಿದ ಎಕ್ಸ್‌ ಫಾರ್ಮ್‌ಗೇಟ್‌ ಬೆಲೆ

 ****

4.5 ಕೆ.ಜಿ; ಭಾರತದಲ್ಲಿನ ಕೋಳಿ ಮಾಂಸದ ತಲಾವಾರು ಬಳಕೆ ಪ್ರಮಾಣ

13 ಕೆ.ಜಿ; ತಮಿಳುನಾಡಿನಲ್ಲಿ ಗರಿಷ್ಠ ಮಟ್ಟದ ತಲಾವಾರು ಬಳಕೆ

11 ಕೆ.ಜಿ; ತಲಾವಾರು ಬಳಕೆಯ ಜಾಗತಿಕ ಸರಾಸರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು