ಶನಿವಾರ, ಜನವರಿ 25, 2020
19 °C

₹33,259ಕ್ಕೆ ತಲುಪಿದ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬ್ಯಾಡಗಿ (ಹಾವೇರಿ ಜಿಲ್ಲೆ) : ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಬೆಲೆ ಮತ್ತೆ ದಾಖಲೆ ಮಟ್ಟಕ್ಕೆ ಏರಿದೆ. ಗುರುವಾರ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹33,259 ರಂತೆ ಮಾರಾಟವಾಗಿದೆ.

ರೋಣ ತಾಲ್ಲೂಕಿನ ರೈತ ಸಂಗರಡ್ಡೆಪ್ಪ ಭೂಸರೆಡ್ಡಿ ಅವರು ಎಪಿಎಂಸಿಗೆ ತಂದಿದ್ದ ಡಬ್ಬಿ ಮೆಣಸಿನಕಾಯಿಗೆ ಈ ದರ ಸಿಕ್ಕಿದೆ.

‘ಕಡ್ಡಿ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹18,609ರಂತೆ ಹಾಗೂ ಗುಂಟೂರ ತಳಿ ಗರಿಷ್ಠ ₹9,009 ರಂತೆ ಮಾರಾಟವಾಗಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಎಸ್‌.ಬಿ.ನ್ಯಾಮಗೌಡ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು