ಭಾನುವಾರ, ಜನವರಿ 19, 2020
29 °C

ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹27 ಸಾವಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡಗಿ (ಹಾವೇರಿ): ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಬೆಲೆ ಮತ್ತೆ ಹೆಚ್ಚಳವಾಗಿದ್ದು ಪ್ರತಿ ಕ್ವಿಂಟಲ್‌ಗೆ ಗರಿಷ್ಠ ₹ 27,111 ರಂತೆ ಮಾರಾಟವಾಗಿದೆ.

ನಾಲ್ಕೇ ದಿನಗಳಲ್ಲಿ ಕ್ವಿಂಟಲ್‌ಗೆ ಒಂದು ಸಾವಿರ ರೂಪಾಯಿ ಹೆಚ್ಚಳವಾದಂತಾಗಿದೆ. ಇಲ್ಲಿನ ಮಾರುಕಟ್ಟೆಗೆ ಗುರುವಾರ 40,845 ಚೀಲ ಮೆಣಸಿನಕಾಯಿ ಆವಕವಾಗಿದ್ದು, ಕಳೆದ ವಾರಕ್ಕಿಂತ 10 ಸಾವಿರ ಚೀಲ ಕಡಿಮೆಯಾಗಿದೆ.

‘ಕಡಿಮೆ ಖಾರ ಹಾಗೂ ವಿಶಿಷ್ಟ ಸ್ವಾದ ಹೊಂದಿರುವ ಡಬ್ಬಿ ಮೆಣಸಿನಕಾಯಿಗೆ ಬೇಡಿಕೆ ಹೆಚ್ಚಿದೆ. ಖಾರ ಕಡಿಮೆ ಬಳಸುವ ಗ್ರಾಹಕರು ಇದನ್ನು ಹೆಚ್ಚು ಬಳಸುವುದರಿಂದ ದರದಲ್ಲಿ ಹೆಚ್ಚಳ ಕಂಡು ಬಂದಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಎಸ್‌.ಬಿ.ನ್ಯಾಮಗೌಡ್ರ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು