ನವದೆಹಲಿ: ವಿದ್ಯುತ್ ಚಾಲಿತ ವಾಹನಗಳಿಗೆ ಹಾಗೂ ಬ್ಯಾಟರಿಗಳಿಗೆ ಭಾರತವು ಸಬ್ಸಿಡಿ ನೀಡುತ್ತಿರುವ ವಿಚಾರವಾಗಿ ಚೀನಾ ದೇಶವು ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲ್ಯುಟಿಒ) ದೂರು ಸಲ್ಲಿಸಿದೆ.

ಚೀನಾ ಸಲ್ಲಿಸಿರುವ ದೂರಿನ ವಿವರಗಳನ್ನು ಪರಿಶೀಲಿಸಲಾಗುತ್ತದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು ಹೇಳಿದ್ದಾರೆ.

ಟರ್ಕಿ, ಕೆನಡಾ ಮತ್ತು ಐರೋಪ್ಯ ಒಕ್ಕೂಟದ ವಿರುದ್ಧವೂ ಚೀನಾ ಇದೇ ಬಗೆಯ ದೂರು ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ‘ಅವರು ಭಾರತದ ಜೊತೆ ಸಮಾಲೋಚನೆ ನಡೆಸಲು ಬಯಸಿದ್ದಾರೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

ಡಬ್ಲ್ಯುಟಿಒ ನಿಯಮಗಳ ಪ್ರಕಾರ ವ್ಯಾಜ್ಯ ಇತ್ಯರ್ಥ ಪ್ರಕ್ರಿಯೆಯಲ್ಲಿ ಮೊದಲ ಹಂತವೆಂದರೆ ಸಮಾಲೋಚನೆ ನಡೆಸುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.