ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ವಲಯಕ್ಕೂ ನೆರವು ಅಗತ್ಯ: ಸಿಐಐ

Last Updated 8 ನವೆಂಬರ್ 2020, 16:33 IST
ಅಕ್ಷರ ಗಾತ್ರ

ನವದೆಹಲಿ : ಕೋವಿಡ್‌–19 ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಒಳಗಾಗಿರುವ ಸೇವಾ ವಲಯಕ್ಕೂ ತುರ್ತು ಸಾಲ ಖಾತರಿ ಯೋಜನೆ ನೀಡುವಂತೆ ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಕೇಂದ್ರ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಿದೆ.

ಮುಖ್ಯವಾಗಿ ಆತಿಥ್ಯ, ಪ್ರವಾಸ, ವಿಮಾನಯಾನ ಮತ್ತು ರಿಟೇಲ್‌ ವಲಯಗಳು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿವೆ. ಇವುಗಳಿಂದ ಈ ವರ್ಷ ವಿತ್ತೀಯ ಕೊರತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಭಾರಿ ಸಂಖ್ಯೆಯಲ್ಲಿ ಉದ್ಯೋಗ ನೀಡುತ್ತಿರುವುದರಿಂದ ಹಣಕಾಸಿನ ನೆರವು ಅಗತ್ಯವಾಗಿದೆ ಎಂದು ಹೇಳಿದೆ.

ಸೇವಾ ವಲಯಗಳು ಬೇಡಿಕೆ ಕುಸಿತದಿಂದಾಗಿ ಅತಿ ಹೆಚ್ಚಿನ ನಗದು ಕೊರತೆ ಎದುರಿಸುತ್ತಿವೆ. ಸಾಲ ಖಾತರಿ ಯೋಜನೆಯಿಂದಾಗಿ ಬೇಡಿಕೆ ಚೇತರಿಕೆ ಕಂಡುಕೊಳ್ಳುವವರೆಗೂ ಅವುಗಳಿಗೆ ಮಧ್ಯಂತರ ನಗದು ಬೆಂಬಲ ಸಿಗಲಿದೆ ಎನ್ನುವುದು ಸಿಐಐ ಆಲೋಚನೆಯಾಗಿದೆ.

ದೇಶದ ಜಿಡಿಪಿ ಬೆಳವಣಿಗೆಗೆ ಶೇ 63ರಷ್ಟು ಕೊಡುಗೆ ನೀಡುತ್ತಿರುವ ಸೇವಾ ವಲಯವು ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 24.3ರಷ್ಟು ಕುಸಿತ ಕಂಡಿದೆ ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT