ದಿನ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗದಲ್ಲಿ ಹೊಸ ಹುರುಪು ಮೂಡಲಿದೆ
Published 1 ಮಾರ್ಚ್ 2026, 22:25 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೌಟುಂಬಿಕ ನೆಮ್ಮದಿ ಸಮೃದ್ಧಿಯಾಗಿರಲಿದ್ದು, ಅಣ್ಣ ತಮ್ಮಂದಿರ ನಡುವೆ ಸಣ್ಣ-ಪುಟ್ಟ ಮಾನಸಿಕ ಕಿರಿಕಿರಿಗಳೂ ತಪ್ಪುತ್ತವೆ. ನಿಮ್ಮ ಮನಸ್ಸಿನಲ್ಲಿ ಕೊರೆಯುತ್ತಿರುವ ಹಲವು ಚಿಂತೆಗಳಿಗೆ ಈ ದಿನ ಉತ್ತರ ಸಿಗುವುದು.
01 ಮಾರ್ಚ್ 2026, 22:25 IST
ವೃಷಭ
ನಿಮ್ಮ ಸ್ನೇಹಿತರೊಂದಿಗೆ ಜಂಟಿಯಾಗಿ ವ್ಯವಹರಿಸಿದಲ್ಲಿ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳುವುದಕ್ಕೆ ಸಹಾಯವಾಗುವುದು. ಹೊಸ ಜನರನ್ನು ಭೇಟಿಯಾಗುವ ಮೂಲಕ ಉದ್ಯೋಗದಲ್ಲಿ ಹೊಸ ಹುರುಪು ಮೂಡಲಿದೆ.
01 ಮಾರ್ಚ್ 2026, 22:25 IST
ಮಿಥುನ
ಉದ್ಯೋಗದಲ್ಲಿ ಬದಲಾವಣೆಯ ಯೋಚನೆ ಮಾಡುವವರು ಸದ್ಯದ ಪರಿಸ್ಥಿತಿಯಲ್ಲಿ ಸಿಕ್ಕಿರುವ ಕೆಲಸದಲ್ಲೇ ತೃಪ್ತಿಪಡುವುದು ಒಳ್ಳೆಯದು. ಸರಕಾರಿ ಕಚೇರಿಗಳಿಗೆ ಅಲೆದಾಟವು ಹೆಚ್ಚಾಗಿ, ಹಣದ ಖರ್ಚಿಗೆ ಕಾರಣವಾದೀತು.
01 ಮಾರ್ಚ್ 2026, 22:25 IST
ಕರ್ಕಾಟಕ
ತಾಂತ್ರಿಕ ವಿದ್ಯಾಭ್ಯಾಸದ ಅಂತಿಮ ಹಂತ ತಲುಪಿದವರಿಗೆ ಹೆಸರುವಾಸಿ ಕಂಪನಿಯಲ್ಲಿ ಉದ್ಯೋಗ ದೊರಕುವುದು. ಕಂಟ್ರಾಕ್ಟರ್‌ಗಳು ಹಾಗು ಬಿಲ್ಡರ್‌ಗಳಿಗೆ ಈ ದಿನವು ಅನುಕೂಲಕರ ದಿನವಾಗುವುದು.
01 ಮಾರ್ಚ್ 2026, 22:25 IST
ಸಿಂಹ
ಮಹಿಳೆಯರಿಗೆ ಉಪಯೋಗಕ್ಕೆ ಬಾರದ ವಿಚಾರದ ಬಗೆಗಿನ ಚಿಂತನೆಯು ಆರೋಗ್ಯವನ್ನು ಹಾಳು ಮಾಡುತ್ತದೆ. ಪ್ರಾಮಾಣಿಕವಾಗಿ ನಡೆಯುವ ನಿಮಗೆ ವ್ಯವಹಾರದಲ್ಲಿ ಲಾಭ ಕಡಿಮೆ ಇದ್ದರೂ ನೆಮ್ಮದಿ ಇರಲಿದೆ.
01 ಮಾರ್ಚ್ 2026, 22:25 IST
ಕನ್ಯಾ
ನೂತನವಾದ ಸ್ವತ್ತು ಖರೀದಿಯ ವ್ಯವಹಾರಗಳಲ್ಲಿ ಸಮರ್ಥನೀಯ ತೀರ್ಮಾನ ಕೈಗೊಳ್ಳುವುದು ಈ ದಿನದ ಅತೀ ಮುಖ್ಯ ಕೆಲಸವಾಗಿರುತ್ತದೆ. ವೃತ್ತಿ ಪರವಾಗಿ ಇರುವ ಸ್ಪರ್ಧೆಗಳಲ್ಲಿ ಹೆಚ್ಚಿನ ಮುನ್ನಡೆ ನಿಮ್ಮ ಪಾಲಿಗೆ ಇರುವುದು.
01 ಮಾರ್ಚ್ 2026, 22:25 IST
ತುಲಾ
ಗೃಹಾಲಂಕಾರ ವಸ್ತುಗಳು,ಪೀಠೋಪಕರಣಗಳ ವ್ಯಾಪಾರದಿಂದ ಅಧಿಕ ಲಾಭ ಹೊಂದುವಿರಿ. ಮಗನ ಮೇಲಿನ ನಂಬಿಕೆಯು ಕಡಿಮೆಯಾಗುವ ಪ್ರಸಂಗ ನೆಡೆಯಬಹುದು. ತಂದೆ ತಾಯಿ ಆರೋಗ್ಯ ಉತ್ತಮವಾಗಿರುವುದು.
01 ಮಾರ್ಚ್ 2026, 22:25 IST
ವೃಶ್ಚಿಕ
ಕುಟುಂಬದ ಸತ್ಕಾರ್ಯಗಳಲ್ಲಿ ಬಂಧುಗಳ ಸಕ್ರಿಯ ಪಾತ್ರವು ನಿಮ್ಮ ಜವಾಬ್ದಾರಿ ಕಡಿಮೆ ಮಾಡಲಿದೆ. ದುಬಾರಿ ಜೀವನ ಶೈಲಿಯನ್ನು ಇಷ್ಟ ಪಡುವ ನಿಮಗೆ ಅದಕ್ಕೆ ತಕ್ಕಂತಹ ಸರ್ವ ವಿಧದ ಸೌಕರ್ಯ ಸಿಗುವುದು.
01 ಮಾರ್ಚ್ 2026, 22:25 IST
ಧನು
ಪಾಲುಗಾರರಲ್ಲಿ ಮುಖಾಮುಖಿ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವುದು ಒಳ್ಳೆಯದು. ದಕ್ಷರಾಗಿಯೂ ದಾಕ್ಷಿಣ್ಯ ಸ್ವಭಾವದವರಾದ ನಿಮಗೆ ಅಗೌರವ, ನಷ್ಟದಂತಹ ಪರಿಸ್ಥಿತಿಯು ಎದುರಾಗಬಹುದು.
01 ಮಾರ್ಚ್ 2026, 22:25 IST
ಮಕರ
ವೈದ್ಯರ ಸಲಹೆಯಂತೆ ಮನಸ್ಸಿನ ಸಂಯಮಕ್ಕಾಗಿ ಯೋಗ, ಧ್ಯಾನದತ್ತ ಗಮನ ಹರಿಸಿ. ಆರೋಗ್ಯ ವೃದ್ಧಿಗಾಗಿ ದೈನಂದಿನ ಚಟುವಟಿಕೆಯಲ್ಲಿ ಸರಿಯಾದ ನಿಯಮ ಪಾಲಿಸುವುದು ಒಳ್ಳೆಯದು. ದ್ವಿ ಚಕ್ರ ವಾಹನ ಖರೀದಿ ಯೋಗವಿದೆ.
01 ಮಾರ್ಚ್ 2026, 22:25 IST
ಕುಂಭ
ನಿಮ್ಮ ದ್ವಿಸ್ವಭಾವದ ನಡವಳಿಕೆಯನ್ನು ಹಿಡಿತದಲ್ಲಿಟ್ಟುಕೊಂಡರೆ ಸಂದಿಗ್ಧ ಪರಿಸ್ಥಿತಿಗೆ ಸಿಲುಕುವುದು ತಪ್ಪುವುದು. ಗುಪ್ತಚರ ಇಲಾಖೆ ಉದ್ಯೋಗಿಗಳಿಗೆ ಸರ್ಕಾರದಿಂದ ಪ್ರಶಸ್ತಿ ಮತ್ತು ಬಹುಮಾನ ದೊರೆಯಲಿದೆ.
01 ಮಾರ್ಚ್ 2026, 22:25 IST
ಮೀನ
ಸಮಸ್ಯೆಯಿಂದ ಹೊರಬರಲು ಯಾವುದೇ ರೀತಿಯ ಮುಚ್ಚುಮರೆ ಇಲ್ಲದೇ ಇರುವುದು ಒಂದೇ ದಾರಿ. ಯಂತ್ರೋಪಕರಣಗಳ ಖರೀದಿಯಿಂದಾಗಿ ಅಧಿಕ ಖರ್ಚು ಸಂಭವಿಸುವುದು. ಕಾಸ್ಮೆಟಿಕ್ ವ್ಯಾಪಾರಿಗಳಿಗೆ ಒಳ್ಳೆಯ ಲಾಭ.
01 ಮಾರ್ಚ್ 2026, 22:25 IST