ರಿಲಯನ್ಸ್‌: ಗರಿಷ್ಠ ವೇಗದ ಬ್ರಾಡ್‌ಬ್ಯಾಂಡ್‌

7

ರಿಲಯನ್ಸ್‌: ಗರಿಷ್ಠ ವೇಗದ ಬ್ರಾಡ್‌ಬ್ಯಾಂಡ್‌

Published:
Updated:

ಮುಂಬೈ: ಅಗ್ಗದ ಮೊಬೈಲ್‌ ದತ್ತಾಂಶ, ಉಚಿತ ಕರೆ ಸೇವೆ ಒದಗಿಸಿ ದೇಶಿ ದೂರಸಂಪರ್ಕ ರಂಗದಲ್ಲಿ ಸಂಚಲನ ಮೂಡಿಸಿರುವ ರಿಲಯನ್ಸ್‌ ಸಂಸ್ಥೆ, ಶೀಘ್ರದಲ್ಲಿಯೇ ಅತ್ಯಂತ ಗರಿಷ್ಠ ವೇಗದ ಬ್ರಾಡ್‌ಬ್ಯಾಂಡ್‌ ಸೇವೆ ಒದಗಿಸಲಿದೆ.

ದೇಶದಾದ್ಯಂತ 1,100 ನಗರಗಳಲ್ಲಿನ ಮನೆಗಳು ಮತ್ತು ಉದ್ದಿಮೆ ಸಂಸ್ಥೆಗಳಿಗೆ ಸ್ಥಿರ ಮಾರ್ಗದ ಫೈಬರ್‌ ಬ್ರಾಡ್‌ಬ್ಯಾಂಡ್‌ ಸೇವೆ ನೀಡಲು ಮತ್ತು ಇ–ಕಾಮರ್ಸ್‌ ಸಂಸ್ಥೆ ಆರಂಭಿಸಲು ಸಂಸ್ಥೆ ನಿರ್ಧರಿಸಿದೆ.

ಗುರುವಾರ ಇಲ್ಲಿ ನಡೆದ ಸಂಸ್ಥೆಯ ಷೇರುದಾರರ ಸಭೆಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.

ಗ್ರಾಹಕರು ಆಗಸ್ಟ್‌ 15ರಿಂದ ಈ ಸ್ಥಿರ ಮಾರ್ಗದ ಗರಿಷ್ಠ ವೇಗದ ಬ್ರಾಡ್‌ಬ್ಯಾಂಡ್‌ ಸೇವೆಗೆ ಹೆಸರು ನೋಂದಾಯಿಸಬಹುದು. ಈ ಸೇವೆ ಎಂದಿನಿಂದ ಜಾರಿಗೆ ಬರಲಿದೆ ಎನ್ನುವುದನ್ನು ಇನ್ನೂ ಪ್ರಕಟಿಸಲಾಗಿಲ್ಲ.

ಸ್ಮಾರ್ಟ್‌ಹೋಂ ಸೌಲಭ್ಯ: ಈ ಫೈಬರ್‌ ಬ್ರಾಡ್‌ಬ್ಯಾಂಡ್‌ ಮೂಲಕ ಅತ್ಯಂತ ಗರಿಷ್ಠ ವೇಗದ ಇಂಟರ್‌ನೆಟ್‌, ಟೆಲಿವಿಷನ್‌ಗಳಲ್ಲಿ ಸುಸ್ಪಷ್ಟ (ಎಚ್‌ಡಿ) ಗುಣಮಟ್ಟದ ಮನರಂಜನೆ ಕಾರ್ಯಕ್ರಮಗಳ ವೀಕ್ಷಣೆ, ಒಂದಕ್ಕಿಂತ ಹೆಚ್ಚು ತಂಡಗಳ ಜತೆ ವಿಡಿಯೊ ಕಾನ್ಪರೆನ್ಸ್‌, ವರ್ಚುವಲ್‌ ರಿಯಾಲಿಟಿ ಗೇಮಿಂಗ್‌, ಡಿಜಿಟಲ್‌ ಶಾಪಿಂಗ್‌ ಒಳಗೊಂಡಂತೆ ಸ್ಮಾರ್ಟ್‌ ಹೋಂ ಸೌಲಭ್ಯಗಳೆಲ್ಲ ಲಭ್ಯವಾಗಲಿವೆ.

‘ಜಿಯೊ ಗಿಗಾಫೈಬರ್‌, ಇಂಟರ್‌ನೆಟ್‌ ಬಳಕೆಯಲ್ಲಿ ಗರಿಷ್ಠ ವೇಗ ಒದಗಿಸಲಿದೆ. ಕ್ಷಿಪ್ರ ಗತಿಯಲ್ಲಿ ಮಾಹಿತಿ ಅಪ್‌ಲೋಡ್‌ – ಡೌನ್‌ಲೋಡ್‌ ಮಾಡಿಕೊಳ್ಳುವ ಸೌಲಭ್ಯ ದೊರೆಯಲಿದೆ.

‘ರಿಲಯನ್ಸ್‌ನ ಮೊಬೈಲ್‌ ಸೇವಾ ಸಂಸ್ಥೆಯಾಗಿರುವ ಜಿಯೊ, ಮುಂಬರುವ ವರ್ಷಗಳಲ್ಲಿ ಬ್ರಾಡ್‌ಬ್ಯಾಂಡ್‌ ಬಳಕೆ ಕ್ಷೇತ್ರದಲ್ಲಿ ಭಾರತವನ್ನು ಮುಂಚೂಣಿ 5 ದೇಶಗಳ ಮಟ್ಟಕ್ಕೆ ಕೊಂಡೊಯ್ಯಲಿದೆ’ ಎಂದು ಮುಕೇಶ್‌ ಹೇಳಿದ್ದಾರೆ.

ಜಿಯೊ ಫೋನ್‌2: ಎರಡನೇ ತಲೆಮಾರಿನ ಜಿಯೊ ಫೋನ್‌ ಪರಿಚಯಿಸಲಾಗಿದೆ. ಇದರಲ್ಲಿ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮತ್ತು ಯೂಟ್ಯೂಬ್‌ ಸೌಲಭ್ಯಗಳಿವೆ. ಆಗಸ್ಟ್‌ 15 ರಿಂದ ₹ 2,999ಕ್ಕೆ ಈ ಫೋನ್‌ಗೆ ಬುಕಿಂಗ್‌ ಮಾಡಬಹುದು.

ಮಾನ್‌ಸೂನ್‌ ಹಂಗಾಮ: ಹಳೆಯ ಫೀಚರ್‌ ಫೋನ್‌ಗಳನ್ನು ಹೊಸ ಜಿಯೊಫೋನ್‌ಗೆ ₹ 501ಕ್ಕೆ ಬದಲಾಯಿಸುವ ಸೌಲಭ್ಯವನ್ನೂ ಪ್ರಕಟಿಸಲಾಗಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !