ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಫಿ ಡೇ ಸಾಲ ಬಾಕಿ ₹433 ಕೋಟಿ

Published 5 ಜುಲೈ 2024, 14:39 IST
Last Updated 5 ಜುಲೈ 2024, 14:39 IST
ಅಕ್ಷರ ಗಾತ್ರ

ನವದೆಹಲಿ: 2024–25ನೇ ಆರ್ಥಿಕ ವರ್ಷದ ಜೂನ್‌ ಅಂತ್ಯಕ್ಕೆ ಕಂಪನಿಯು ₹433.91 ಕೋಟಿ ಸಾಲವನ್ನು ಬಾಕಿ ಉಳಿಸಿಕೊಂಡಿದೆ ಎಂದು ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಸಿಡಿಇಎಲ್‌) ತಿಳಿಸಿದೆ.

ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ಮಾರ್ಪಡಿಸಲಾಗದ ಡಿಬೆಂಚರ್‌ಗಳು (ಎನ್‌ಸಿಡಿ) ಹಾಗೂ ನಾನ್‌ ಕನ್ವರ್ಟಬಲ್‌ ರೀಡಿಮಬಲ್‌ ಪ್ರೆಪೆರನ್ಸ್‌ ಷೇರುಗಳಲ್ಲಿ (ಎನ್‌ಸಿಆರ್‌ಪಿಎಸ್‌) ಇಷ್ಟು ಮೊತ್ತದ ಸಾಲ ಬಾಕಿ ಉಳಿದಿದೆ ಎಂದು ಮೊದಲ ತ್ರೈಮಾಸಿಕದ ಫಲಿತಾಂಶಕ್ಕೆ ಸಂಬಂಧಿಸಿದಂತೆ ಷೇರುಪೇಟೆಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ.

‘ಅಸಲು ಮತ್ತು ಬಡ್ಡಿ ಪಾವತಿ ವಿಳಂಬದಿಂದಾಗಿ ಸಾಲಗಾರರು ಕಂಪನಿಗೆ ನೋಟಿಸ್‌ ನೀಡಿದ್ದಾರೆ. ನ್ಯಾಯಾಲಯಗಳಲ್ಲಿ ಈ ಕುರಿತು ವಿಚಾರಣೆ ನಡೆಯುತ್ತಿದೆ. ಕಾನೂನು ತೊಡಕು ಹಾಗೂ ಒಂದೇ ಬಾರಿಗೆ ಸಾಲ ಮರುಪಾವತಿಗೆ ಸಂಬಂಧಿಸಿದ ಪ್ರಕರಣಗಳು ಇತ್ಯರ್ಥಗೊಂಡಿಲ್ಲ. ಹಾಗಾಗಿ, 2021ರ ಏಪ್ರಿಲ್‌ನಿಂದ ಕಂಪನಿಯು ಬಾಕಿ ಸಾಲದ ಮೊತ್ತಕ್ಕೆ ಬಡ್ಡಿ ಸೇರ್ಪಡೆ ಮಾಡಿಲ್ಲ’ ಎಂದು ತಿಳಿಸಿದೆ.  

ಜೂನ್‌ ಅಂತ್ಯಕ್ಕೆ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಗಳಿಗೆ ಪಾವತಿಸಬೇಕಿರುವ ಸಾಲದ ಅಸಲು ಮೊತ್ತ 183.36 ಕೋಟಿ ಆಗಿದೆ. ಇದಕ್ಕೆ ₹5.78 ಕೋಟಿ ಬಡ್ಡಿ ಬಾಕಿ ಉಳಿದಿದೆ. ಎನ್‌ಸಿಡಿಗೆ ₹200 ಕೋಟಿ ಹಾಗೂ ಎನ್‌ಸಿಆರ್‌ಪಿಎಸ್‌ಗೆ ₹44.77 ಕೋಟಿ ಸಾಲ ಬಾಕಿಯಿದೆ ಎಂದು ಕಂಪನಿಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT