ಭಾನುವಾರ, ಸೆಪ್ಟೆಂಬರ್ 26, 2021
22 °C

₹1,644 ಕೋಟಿ ಪಾವತಿ: ಕಾಫಿ ಡೇ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಾಫಿ ಡೇ ಎಂಟರ್‌ಪ್ರೈಸಸ್‌ ಲಿಮಿಟೆಡ್‌ (ಸಿಡಿಇಎಲ್‌) ₹1,644 ಕೋಟಿ ಸಾಲವನ್ನು 13 ಸಾಲದಾತ ಸಂಸ್ಥೆಗಳಿಗೆ ಮರುಪಾವತಿಸಿದೆ.

ಬೆಂಗಳೂರಿನಲ್ಲಿರುವ ಗ್ಲೋಬಲ್‌ ವಿಲೇಜ್‌ ಟೆಕ್‌ ಪಾರ್ಕ್‌ ಅನ್ನು ಅಮೆರಿಕದ ಬ್ಲಾಕ್‌ಸ್ಟೋನ್‌ ಸಮೂಹಕ್ಕೆ ಮಾರಾಟ ಮಾಡಿ ಈ ಮೊತ್ತದ ಸಾಲ ಮರುಪಾವತಿ ಮಾಡಿರುವುದಾಗಿ ತಿಳಿಸಿದೆ.

ಇದರಿಂದ ಸಿಡಿಇಎಲ್‌ನ ಒಟ್ಟಾರೆ ಸಾಲದ ಮೊತ್ತವು ಮಾರ್ಚ್‌ 27ರ ಅಂತ್ಯಕ್ಕೆ ₹ 4,900 ಕೋಟಿಗಳಿಂದ ₹ 3,200 ಕೋಟಿಗಳಿಗೆ ಇಳಿಕೆಯಾಗಿದೆ. 

ಸದ್ಯದ ನಿರ್ದೇಶಕ ಮಂಡಳಿಯು ಕಂಪನಿಯ ಪ್ರಮುಖವಲ್ಲದ ವಹಿವಾಟಿನ ಷೇರು ಮಾರಾಟ ಮಾಡಿ ಸಾಲದ ಹೊರೆ ತಗ್ಗಿಸಲು ಗಮನ ಕೇಂದ್ರೀಕರಿಸಿದೆ.

ಸಿದ್ಧಾರ್ಥ ಅವರ ಸಾವಿನ ನಂತರವೇ ಪ್ರವರ್ತಕರ ಕುಟುಂಬದ ಸದಸ್ಯರು ಮತ್ತು ಆಡಳಿತ ಮಂಡಳಿಯು ಕಂಪನಿಯ ವಹಿವಾಟನ್ನು ಮುಂದು ವರೆಸಿದೆ.

ಟೆಕ್‌ ಪಾರ್ಕ್‌ ಅನ್ನು ₹ 2,700 ಕೋಟಿಗೆ ಅಮೆರಿಕದ ಬ್ಲ್ಯಾಕ್‌ಸ್ಟೋನ್‌ ಮತ್ತು ಸಾಲರ್‌ ಪುರಿಯಾ ಸತ್ವಾ ಕಂಪನಿಗಳಿಗೆ ಮಾರಾಟ ಮಾಡುವುದಾಗಿ ಘೋಷಿಸಿದೆ. ಮೊದಲ ಕಂತಿನಲ್ಲಿ ₹ 2,000 ಕೋಟಿ ಪಡೆದುಕೊಂಡಿದೆ. 

‘ಕಷ್ಟದ ಸಂದರ್ಭದಲ್ಲಿಯೂ, ಮಾರಾಟ ಒಪ್ಪಂದದಿಂದ ಪಡೆದಿರುವ ಮೊತ್ತದಲ್ಲಿ ಬಡ್ಡಿದರವನ್ನೂ ಸೇರಿಸಿ ₹ 1,644 ಕೋಟಿ ಸಾಲ ಮರುಪಾವತಿ ಮಾಡಲಾಗಿದೆ’ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಆ್ಯಕ್ಸಿಸ್‌ ಬ್ಯಾಂಕ್‌, ಸ್ಟ್ಯಾಂಡರ್ಡ್‌ ಚಾರ್ಟರ್ಡ್‌, ಪಿರಾಮಲ್‌, ಯೆಸ್ ಬ್ಯಾಂಕ್‌, ಆರ್‌ಬಿಎಲ್‌, ಬಜಾಜ್‌ ಫೈನಾನ್ಸ್‌ ಮತ್ತು ಇಂಡಿಯಬುಲ್ಸ್‌ ಕಂಪನಿಗಳಿಗೆ ಸಾಲ ಮರುಪಾವತಿ ಆಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು