ಸೋಮವಾರ, ಅಕ್ಟೋಬರ್ 18, 2021
22 °C

ಜಿಎಸ್‌ಟಿಆರ್‌–1: ಜನವರಿ 1ರಿಂದ ಹೊಸ ನಿಯಮ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹಿಂದಿನ ಒಂದು ತಿಂಗಳ ಜಿಎಸ್‌ಟಿಆರ್‌–3ಬಿ ವಿವರ ಸಲ್ಲಿಸದವರು, ತಾವು ಪೂರೈಕೆ ಮಾಡಿರುವ ವಸ್ತುಗಳ, ತಾವು ನೀಡಿದ ಸೇವೆಗಳ ವಿವರವನ್ನು ಜಿಎಸ್‌ಟಿಆರ್‌–1 ಮೂಲಕ ಸಲ್ಲಿಸುವ ಅವಕಾಶ 2022ರ ಜನವರಿ 1ರಿಂದ ಇರುವುದಿಲ್ಲ.

ಕೇಂದ್ರ ಜಿಎಸ್‌ಟಿ ನಿಯಮ 59 (6)ಗೆ ತಿದ್ದುಪಡಿ ತರುವ ಮೂಲಕ ಇದನ್ನು ಜಾರಿಗೆ ತರಲು ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ.

ಸದ್ಯ ಇರುವ ನಿಯಮದ ಪ್ರಕಾರ, ಹಿಂದಿನ 2 ತಿಂಗಳುಗಳಲ್ಲಿ ಸತತವಾಗಿ ಜಿಎಸ್‌ಟಿಆರ್‌–3ಬಿ ವಿವರ ಸಲ್ಲಿಸದೇ ಇದ್ದರೆ ಅಂತಹವರಿಗೆ ಜಿಎಸ್‌ಟಿಆರ್‌–1 ಸಲ್ಲಿಸಲು ಸಾಧ್ಯವಾಗುವುದಿಲ್ಲ.

ವ್ಯಾಪಾರಿಗಳು ಪ್ರತಿ ತಿಂಗಳು ಜಿಎಸ್‌ಟಿಆರ್‌–1 ವಿವರಗಳನ್ನು 11ನೆಯ ತಾರೀಕಿನೊಳಗೆ ಸಲ್ಲಿಸುತ್ತಾರೆ. ತೆರಿಗೆ ಪಾವತಿಸುವ ಜಿಎಸ್‌ಟಿಆರ್‌–3ಬಿ ವಿವರವನ್ನು 20 ರಿಂದ 24ನೆಯ ತಾರೀಕಿನೊಳಗೆ ಸಲ್ಲಿಸಲಾಗುತ್ತದೆ.

ತೆರಿಗೆ ಮರುಪಾವತಿಗೆ ಅರ್ಜಿ ಸಲ್ಲಿಸಲು ಜಿಎಸ್‌ಟಿ ನೋಂದಣಿ ಸಂಖ್ಯೆಯನ್ನು ಆಧಾರ್‌ನೊಂದಿಗೆ ಜೋಡಿಸುವುದನ್ನು ಕಡ್ಡಾಯ ಮಾಡಲಾಗಿದೆ. ಜಿಎಸ್‌ಟಿ ನೋಂದಣಿ ರದ್ದತಿಗೆ ಅರ್ಜಿ ಸಲ್ಲಿಸಲು ಸಹ ಆಧಾರ್‌ ದೃಢೀಕರಣ ಮಾಡಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು