ಮಂಗಳವಾರ, ಡಿಸೆಂಬರ್ 7, 2021
20 °C

ಜಿಎಸ್‌ಟಿ: ಸೆ. 1ರಿಂದ ಹೊಸ ನಿಯಮ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹಿಂದಿನ ಎರಡು ತಿಂಗಳುಗಳಲ್ಲಿ ಸತತವಾಗಿ ಜಿಎಸ್‌ಟಿಆರ್‌–3ಬಿ ವಿವರ ಸಲ್ಲಿಸದವರು, ತಾವು ಪೂರೈಕೆ ಮಾಡಿರುವ ವಸ್ತುಗಳ ಅಥವಾ ತಾವು ನೀಡಿದ ಸೇವೆಗಳ ವಿವರವನ್ನು ಜಿಎಸ್‌ಟಿಆರ್‌–1 ಮೂಲಕ ಸಲ್ಲಿಸುವ ಅವಕಾಶ ಸೆಪ್ಟೆಂಬರ್‌ 1ರಿಂದ ಇರುವುದಿಲ್ಲ.

ವ್ಯಾಪಾರಿಗಳು ಪ್ರತಿ ತಿಂಗಳು ಜಿಎಸ್‌ಟಿಆರ್‌–1 ವಿವರಗಳನ್ನು 11ನೆಯ ತಾರೀಕಿನೊಳಗೆ ಸಲ್ಲಿಸುತ್ತಾರೆ. ತೆರಿಗೆ ಪಾವತಿಸುವ ಜಿಎಸ್‌ಟಿಆರ್‌–3ಬಿ ವಿವರವನ್ನು 20ರಿಂದ 24ನೆಯ ತಾರೀಕಿನೊಳಗೆ ಸಲ್ಲಿಸಲಾಗುತ್ತದೆ.

ಮೂರು ತಿಂಗಳಿಗೆ ಒಮ್ಮೆ ವಿವರ ಸಲ್ಲಿಸುವವರಿಗೆ, ಹಿಂದಿನ ತೆರಿಗೆ ಅವಧಿಯಲ್ಲಿ ಜಿಎಸ್‌ಟಿಆರ್‌–3ಬಿ ಸಲ್ಲಿಸದಿದ್ದಲ್ಲಿ, ಜಿಎಸ್‌ಟಿಆರ್‌–1 ವಿವರ ಸಲ್ಲಿಸುವ ಅವಕಾಶ ನಿರಾಕರಿಸಲಾಗುತ್ತದೆ ಎಂದು ಜಿಎಸ್‌ಟಿ ನೆಟ್‌ವರ್ಕ್‌ ಸಂಸ್ಥೆ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು