ಸೋಮವಾರ, ಜನವರಿ 17, 2022
21 °C

ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ₹102.50 ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆ.ಜಿಯ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ ದರದಲ್ಲಿ ₹102.50 ಇಳಿಕೆ ಮಾಡಿವೆ. ಈ ದರ ಇಳಿಕೆಯಿಂದಾಗಿ ಹೋಟೆಲ್‌ನಲ್ಲಿ ಊಟ ಉಪಾಹಾರದ ದರದಲ್ಲಿ ಮತ್ತೆ ಇಳಿಕೆ ಆಗುವ ಸಾಧ್ಯತೆ ಇದೆ.

ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ ಜಾಲತಾಣದಲ್ಲಿ ಇರುವ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ 19 ಕೆ.ಜಿ. ವಾಣಿಜ್ಯ ಬಳಕೆಯ ಸಿಲಿಂಡರ್‌ ದರವು ₹2,083ಕ್ಕೆ ಇಳಿಕೆ ಆಗಿದೆ.

ಈ ಹಿಂದೆ ನವೆಂಬರ್‌ 1ರಂದು ಸಿಲಿಂಡರ್‌ ದರದಲ್ಲಿ ₹266 ಮತ್ತು ಡಿಸೆಂಬರ್‌ 1ರಂದು ಒಂದು ಸಿಲಿಂಡರ್ ದರದಲ್ಲಿ ₹ 100 ಏರಿಕೆ ಮಾಡಲಾಗಿತ್ತು

ಗೃಹ ಬಳಕೆಯ 14.2 ಕೆ.ಜಿ.ಯ ಎಲ್‌ಪಿಜಿ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಇಳಿಕೆ ಆಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು