ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿತಾಸಕ್ತಿ ಸಂಘರ್ಷ: ಸೆಬಿ ಅಧ್ಯಕ್ಷೆ ವಿರುದ್ಧ ಕಾಂಗ್ರೆಸ್‌ ಮತ್ತೊಂದು ಆರೋ‍ಪ

Published : 6 ಸೆಪ್ಟೆಂಬರ್ 2024, 13:44 IST
Last Updated : 6 ಸೆಪ್ಟೆಂಬರ್ 2024, 13:44 IST
ಫಾಲೋ ಮಾಡಿ
Comments

ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್ ವಿರುದ್ಧ ಕಾಂಗ್ರೆಸ್‌, ‘ಹಿತಾಸಕ್ತಿ ಸಂಘರ್ಷ’ದ ಮತ್ತೊಂದು ಆರೋಪ ಮಾಡಿದೆ.

ಮಾಧವಿ ಅವರು ಸೆಬಿಯ ಪೂರ್ಣಾವಧಿ ಸದಸ್ಯರಾಗಿ ಆಯ್ಕೆಯಾದ ಬಳಿಕವೂ ಕಂಪನಿಯೊಂದರಿಂದ ಬಾಡಿಗೆ ರೂಪದಲ್ಲಿ ಆದಾಯ ಪಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್‌ ಮಾಧ್ಯಮ ವಿಭಾಗದ ಮುಖ್ಯಸ್ಥ ಪವರ್‌ ಖೇರಾ ಅವರು ಶುಕ್ರವಾರ ಹೇಳಿದ್ದಾರೆ.

‘2018 ರಿಂದ 2024ರವರೆಗೆ ಮಾಧವಿ ಅವರು ‘ಕರೊಲ್ ಇನ್ಫೊ ಸರ್ವಿಸಸ್‌ ಲಿಮಿಟೆಡ್‌’ ಎಂಬ ಕಂಪನಿಯಿಂದ ಬಾಡಿಗೆ ಆದಾಯದ ರೂಪದಲ್ಲಿ ₹2.16 ಕೋಟಿ ಪಡೆದುಕೊಂಡಿದ್ದಾರೆ. ಈ ಕಂಪನಿಯು ವೋಕ್‌ಹಾಟ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ. ವೋಕ್‌ಹಾಟ್‌ ಲಿಮಿಟೆಡ್‌ ವಿರುದ್ಧ ಇನ್‌ಸೈಡರ್‌ ಟ್ರೇಡಿಂಗ್‌ ಸೇರಿದಂತೆ ವಿವಿಧ ಪ್ರಕರಣಗಳ ಕುರಿತು ಸೆಬಿ ತನಿಖೆ ನಡೆಸುತ್ತಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆಬಿಯಿಂದ ತನಿಖೆ ಎದುರಿಸುತ್ತಿರುವ ಕಂಪನಿಯಿಂದ ಮಾಧವಿ ಅವರು ಬಾಡಿಗೆ ಪಡೆದಿರುವುದು ‘ಹಿತಾಸಕ್ತಿ ಸಂಘರ್ಷ’ಕ್ಕೆ ಕಾರಣವಾಗಿರುವ ಭ್ರಷ್ಟಾಚಾರ ಪ್ರಕರಣ ಆಗಿದೆ. ಮಾತ್ರವಲ್ಲ, ಸೆಬಿ ನಿಯಮಗಳ ಉಲ್ಲಂಘನೆಯೂ ಹೌದು ಎಂದರು.

ಪ್ರಧಾನಿ ಮೌನ ಏಕೆ?: ಸೆಬಿ ಅಧ್ಯಕ್ಷೆ ವಿರುದ್ಧ ಹಲವು ಆರೋಪಗಳು ಕೇಳಿಬಂದ ಬಳಿಕವೂ ಪ್ರಧಾನಿ ಅವರು ಮೌನ ವಹಿಸಿರುವುದು ಏಕೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ.

‘ಸೆಬಿಯ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಕುಸಿದಿರುವುದನ್ನು ತೋರಿಸಲು ಇನ್ನೆಷ್ಟು ಪುರಾವೆಗಳು ಬೇಕು ಎಂಬ ಪ್ರಶ್ನೆಯನ್ನು ಪ್ರಧಾನಿ ಅವರಿಗೆ ಕೇಳಬೇಕಾಗಿದೆ’ ಎಂದಿದ್ದಾರೆ.

ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಸುಳ್ಳು ಎಂದು ಸಾಬೀತುಪಡಿಸುವಂತೆ ಸೆಬಿ ಅಧ್ಯಕ್ಷರಿಗೆ ಸವಾಲು ಹಾಕುತ್ತೇನೆ.
–ಪವನ್‌ ಖೇರಾ, ಕಾಂಗ್ರೆಸ್‌ ಮಾಧ್ಯಮ ವಿಭಾಗದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT