ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ಪ್ರಗತಿ ಇಳಿಕೆ

ಎಂಟು ಕೈಗಾರಿಕೆಗಳ ಬೆಳವಣಿಗೆ 18 ತಿಂಗಳಲ್ಲೇ ಕನಿಷ್ಠ
Last Updated 1 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಮೂಲಸೌಕರ್ಯ ವಲಯದ ಪ್ರಮುಖ 8 ಕೈಗಾರಿಕೆಗಳ ಪ್ರಗತಿ 2018ರ ಡಿಸೆಂಬರ್‌ನಲ್ಲಿ 18 ತಿಂಗಳ ಕನಿಷ್ಠ ಮಟ್ಟವಾದ ಶೇ 2.6ಕ್ಕೆ ಇಳಿಕೆಯಾಗಿದೆ.

ಕಚ್ಚಾತೈಲ, ತೈಲಾಗಾರ ಉತ್ಪನ್ನ, ರಸಗೊಬ್ಬರಗಳ ಉತ್ಪಾದನೆಯಲ್ಲಿನ ಇಳಿಕೆಯಿಂದ ಬೆಳವಣಿಗೆ ಕುಂಠಿತವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ.

ಕಚ್ಚಾ ತೈಲ, ತೈಲಾಗಾರ ಮತ್ತು ರಸಗೊಬ್ಬರ ವಲಯದ ಉತ್ಪಾದನೆ ಕ್ರಮವಾಗಿ ಶೇ 4.3, ಶೇ 4.8 ಮತ್ತು ಶೇ 2.4ರಷ್ಟು ನಕಾರಾತ್ಮಕ ಮಟ್ಟದಲ್ಲಿವೆ.

ಈ ಹಿಂದೆ 2017ರ ಜೂನ್‌ನಲ್ಲಿ ಮೂಲಸೌಕರ್ಯ ವಲಯದ ಪ್ರಗತಿ ಶೇ 1ರಷ್ಟು ಕನಿಷ್ಠ ಮಟ್ಟದಲ್ಲಿತ್ತು.

ಕಲ್ಲಿದ್ದಲು, ಕಚ್ಚಾತೈಲ, ನೈಸರ್ಗಿಕ ಅನಿಲ, ತೈಲಾಗಾರ, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್‌ ವಲಯದ ಪ್ರಗತಿ 2017ರ ಡಿಸೆಂಬರ್‌ನಲ್ಲಿ ಶೇ 3.8ರಷ್ಟಿತ್ತು.

ಕಲ್ಲಿದ್ದಲು, ನೈಸರ್ಗಿಕ ಅನಿಲ ಮತ್ತು ಉಕ್ಕು ವಲಯದ ಉತ್ಪಾದನೆಯಲ್ಲಿ ಏರಿಕೆಯಾಗಿದೆ.

ದೇಶದ ಕೈಗಾರಿಕಾ ಉತ್ಪಾದನಾ ಸೂಚ್ಯಂಕಕ್ಕೆ (ಐಐಪಿ) ಈ 8 ಕೈಗಾರಿಕೆಗಳು ಶೇ 41ರಷ್ಟು ಕೊಡುಗೆ ನೀಡುತ್ತಿವೆ.

ಹೀಗಾಗಿ ಮೂಲಸೌಕರ್ಯ ವಲಯದ ಬೆಳವಣಿಗೆಯಲ್ಲಿ ಇಳಿಕೆಯಾದರೆ ಅದು ಕೈಗಾರಿಕಾ ಪ್ರಗತಿಯ ಮೇಲೂ ನಕಾರಾತ್ಮಕ ಪರಿಣಾಮ ಬೀರಲಿದೆ.

2018–10ರ ಏಪ್ರಿಲ್‌–ಡಿಸೆಂಬರ್‌ ಅವಧಿಯಲ್ಲಿ ವಲಯದ ಪ್ರಗತಿಯು ಶೇ 3.9ರಿಂದ ಶೇ 4.8ಕ್ಕೆ ಏರಿಕೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT