ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ವಿಮಾನಯಾನ ವಲಯಕ್ಕೆ ಹೆಚ್ಚು ಹಾನಿ

Last Updated 26 ಡಿಸೆಂಬರ್ 2020, 13:50 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕವು ವಿಮಾನಯಾನ ವಲಯದ ಮೇಲೆ ಅತಿ ಹೆಚ್ಚಿನ ಪರಿಣಾಮ ಉಂಟುಮಾಡಿದೆ. ಬಹುತೇಕ ಕಂಪನಿಗಳು ನಷ್ಟ ಅನುಭವಿಸುತ್ತಿವೆ. ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ, ವೇತನ ರಹಿತ ರಜೆ ನೀಡುವ, ವೇತನ ಕಡಿತ ಮಾಡುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಅನಿವಾರ್ಯ ಸ್ಥಿತಿಯು ಕೋವಿಡ್‌ನಿಂದ ಸೃಷ್ಟಿಯಾಗಿದೆ.

ಕೊರೊನಾ ವೈರಸ್‌ ಹರಡುವಿಕೆ ಆರಂಭವಾಗುತ್ತಿದ್ದಂತೆಯೇ ಮಾರ್ಚ್‌ 23 ರಿಂದ ಅಂತರರಾಷ್ಟ್ರೀಯ ಹಾಗೂ ಮಾರ್ಚ್‌ 25 ರಿಂದ ದೇಶಿ ವಿಮಾನ ಪ್ರಯಾಣವನ್ನು ತಾತ್ಕಾಲಿಕವಾಗಿ ರದ್ದುಮಾಡಲಾಯಿತು. ಮೇ 25 ರಿಂದ ಸೀಮಿತವಾಗಿ ದೇಶಿ ವಿಮಾನ ಹಾರಾಟ ಆರಂಭವಾಯಿತು. ಹೀಗಾಗಿ ಇಂಡಿಗೊ ಕಂಪನಿಗೆ ಮೊದಲ ಹಣಕಾಸು ವರ್ಷದಲ್ಲಿ ₹ 2,884 ಕೋಟಿ ಹಾಗೂ ಎರಡನೇ ತ್ರೈಮಾಸಿಕದಲ್ಲಿ ₹ 1,194 ಕೋಟಿ ನಷ್ಟವಾಯಿತು. ಸ್ಪೈಸ್‌ಜೆಟ್‌ ಸಹ ಮೊದಲ ತ್ರೈಮಾಸಿಕದಲ್ಲಿ ₹ 600 ಕೋಟಿ ಹಾಗೂ ಎರಡನೇ ತ್ರೈಮಾಸಿಕದಲ್ಲಿ ₹ 112 ಕೋಟಿ ನಷ್ಟ ಅನುಭವಿಸುವಂತಾಯಿತು.

ದೇಶಿ ಪ್ರಯಾಣಕ್ಕೆ ಹೋಲಿಸಿದರೆ ವಿದೇಶಿ ವಿಮಾನ ಪ್ರಯಾಣದಲ್ಲಿ ಚೇತರಿಕೆಯು ಬಹಳ ನಿಧಾನವಾಗಿ ಇರುವ ಅಂದಾಜು ಮಾಡಲಾಗಿದೆ. ಇದರಿಂದ ಏರ್‌ ಇಂಡಿಯಾಕ್ಕೆ ಹೆಚ್ಚು ನಷ್ಟವಾಗಲಿದೆ. ಏಕೆಂದರೆ ಅದರ ಶೇ 60ರಷ್ಟು ವರಮಾನವು ಅಂತರರಾಷ್ಟ್ರೀಯ ಕಾರ್ಯಾಚರಣೆಯಿಂದಲೇ ಬರುತ್ತಿತ್ತು ಎಂದು ವಿಮಾನಯಾನ ಸಲಹಾ ಸಂಸ್ಥೆ ಸಿಎಪಿಎ ಈಚೆಗಷ್ಟೇ ಹೇಳಿದೆ.

ಸದ್ಯದ ಬೆಳವಣಿಗೆಯನ್ನು ಗಮನಿಸಿದರೆ, 2020-21ರಲ್ಲಿ ದೇಶಿ ಮತ್ತು ಅಂತರರಾಷ್ಟ್ರೀಯ ಪ್ರಯಾಣವನ್ನೂ ಒಳಗೊಂಡು ಒಟ್ಟಾರೆಯಾಗಿ 5 ಕೋಟಿಯಿಂದ 6 ಕೋಟಿ ಮಂದಿ ಪ್ರಯಾಣಿಸುವ ಅಂದಾಜು ಮಾಡಲಾಗಿದೆ. 2019–20ರಲ್ಲಿ ಒಟ್ಟಾರೆಯಾಗಿ 20 ಕೋಟಿ ಮಂದಿ ಪ್ರಯಾಣಿಸಿದ್ದರು. ಸದ್ಯ ದೇಶಿ ವಿಮಾನ ಪ್ರಯಾಣವು ಕೋವಿಡ್‌ಗೂ ಮುಂಚೆ ಇದ್ದ ಮಟ್ಟದ ಶೇ 80ರಷ್ಟಿದೆ. 2021ರ ಮಾರ್ಚ್‌ ವೇಳೆಗೆ ಕೋವಿಡ್‌ಗೂ ಮುಂಚಿನ ಮಟ್ಟವನ್ನು ತಲುಪುವ ನಿರೀಕ್ಷೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT