ಶನಿವಾರ, ಜೂನ್ 19, 2021
27 °C

ಕ್ರೆಡಿಟ್ ಆ್ಯಕ್ಸೆಸ್ ಗ್ರಾಮೀಣ್: ವಹಿವಾಟು ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದೇಶದ ಪ್ರಮುಖ ಕಿರು ಹಣಕಾಸು ಸಂಸ್ಥೆಯಾಗಿರುವ ಕ್ರೆಡಿಟ್ ಆ್ಯಕ್ಸೆಸ್ ಗ್ರಾಮೀಣ್ ಲಿಮಿಟೆಡ್ (ಸಿಎಜಿಎಲ್), 2021ರ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದ ಮತ್ತು ನಾಲ್ಕನೇ ತ್ರೈಮಾಸಿಕದ ತನ್ನ ಲೆಕ್ಕಪರಿಶೋಧಿತ ಹಣಕಾಸು ಸಾಧನೆಯ ವಿವರಗಳನ್ನು ಪ್ರಕಟಿಸಿದೆ.

‘ಸಿಎಜಿಎಲ್‌‘ನ ಸಾಲ ವಿತರಣೆಯು ವರ್ಷದಿಂದ ವರ್ಷಕ್ಕೆ ಶೇಕಡಾ 42 ರಷ್ಟು (₹ 3,331 ಕೋಟಿಯಿಂದ) ಮತ್ತು ತ್ರೈಮಾಸಿಕದಿಂದ ತ್ರೈಮಾಸಿಕ ಅವಧಿಯಲ್ಲಿ ಶೇಕಡಾ 3ರಷ್ಟು (₹  4,590 ಕೋಟಿಯಿಂದ) ₹ 4,726 ಕೋಟಿಗೆ ಏರಿಕೆಯಾಗಿದೆ. ‘ಸಿಎಜಿಎಲ್’ನ ಪಾಲಿಗೆ ಮಾರ್ಚ್‍ನಲ್ಲಿನ ಒಟ್ಟಾರೆ ಸಂಗ್ರಹದ ದಕ್ಷತೆಯು ಸುಧಾರಣೆ ಕಂಡಿದ್ದು, ಅದರ ಅಂಗಸಂಸ್ಥೆಯಾಗಿರುವ ಮದುರಾ ಮೈಕ್ರೊ ಫೈನಾನ್ಸ್ ಲಿಮಿಟೆಡ್‍ನ (ಎಂಎಂಎಫ್‍ಎಲ್) ಸಂಗ್ರಹವೂ ಸುಧಾರಿಸಿದೆ.

ಭವಿಷ್ಯದ ವೆಚ್ಚಗಳನ್ನು ಸರಿದೂಗಿಸಲು ಹಣ ತೆಗೆದು ಇರಿಸುವ ಸಾಂಪ್ರದಾಯಿಕ ಮತ್ತು ಸಾಲಗಳ ವಜಾ ಕ್ರಮಗಳ ಹೊರತಾಗಿಯೂ, 2021ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ತೆರಿಗೆ ಪಾವತಿ ನಂತರದ ಲಾಭವು ವರ್ಷದಿಂದ ವರ್ಷಕ್ಕೆ ಶೇಕಡಾ 83 ರಷ್ಟು ಹೆಚ್ಚಳವಾಗಿ ₹ 30.8 ಕೋಟಿಯಿಂದ ₹ 56.3 ಕೋಟಿಗೆ ಏರಿಕೆಯಾಗಿದೆ.

ಹಣಕಾಸು ಸಾಧನೆಯ ಬಗ್ಗೆ ಪ್ರತಿಕ್ರಿಯಿಸಿರುವ ಕ್ರೆಡಿಟ್ ಆ್ಯಕ್ಸೆಸ್ ಗ್ರಾಮೀಣ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಉದಯ ಕುಮಾರ್ ಹೆಬ್ಬಾರ್ ಅವರು, ‘ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ನಮ್ಮ ವ್ಯವಹಾರದ ಮಾದರಿ ಮತ್ತು ಸದೃಢ ಸ್ವರೂಪದಲ್ಲಿ ಇರುವ ಗ್ರಾಹಕ ಸಂಪರ್ಕದ ಕಾರಣದಿಂದ ನಾಲ್ಕನೇ ತ್ರೈಮಾಸಿಕದಲ್ಲಿ ಸಂಗ್ರಹ ದಕ್ಷತೆ  ಹೆಚ್ಚಿಸಲು ನಮಗೆ ಸಾಧ್ಯವಾಗಿದೆ. 2021ರ ಮಾರ್ಚ್ 31 ಅಂತ್ಯದ ವೇಳೆಗೆ ₹ವ2,484.4 ಕೋಟಿ ನಗದು ಮತ್ತು ಒಟ್ಟು ಸಂಪತ್ತಿನ ಶೇ 16.5ರಷ್ಟು ನಗದನ್ನು ನಾವು ಹೊಂದಿದ್ದೇವೆ’ ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು