ಶನಿವಾರ, ಜನವರಿ 18, 2020
26 °C

ಕಚ್ಚಾ ತೈಲ ಬೆಲೆ ಏರಿಕೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಲಂಡನ್‌: ಇರಾಕ್‌ನಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿದ್ದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಬುಧವಾರ ಕಚ್ಚಾ ತೈಲದ ಬೆಲೆಯು ಶೇ 4.5ರಷ್ಟು ಏರಿಕೆಯಾಗಿದೆ.

ಬ್ರೆಂಟ್‌ ಮತ್ತು ನ್ಯೂಯಾರ್ಕ್‌ ಕಚ್ಚಾ ತೈಲದ ಬೆಲೆಯು ಈಗ ಹಲವು ತಿಂಗಳ ಹಿಂದಿನ ಗರಿಷ್ಠ ಮಟ್ಟಕ್ಕೆ ತಲುಪಿದೆ. ಮಧ್ಯಪ್ರಾಚ್ಯದಲ್ಲಿನ ತ್ವೇಷಮಯ ಪರಿಸ್ಥಿತಿಯು ಉಲ್ಬಣಗೊಂಡು ಯುದ್ಧಕ್ಕೆ ಹಾದಿ ಮಾಡಿಕೊಟ್ಟರೆ ತೈಲ ಬೆಲೆ ಇನ್ನಷ್ಟು ಏರಿಕೆಯಾಗುವ ಆತಂಕ ಕಂಡು ಬಂದಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು