ಮುಂಬೈ : ನಗದುರಹಿತ (ಡಿಜಿಟಲ್) ವಹಿವಾಟು ಉತ್ತೇಜಿಸಲು ಹಲವಾರು ಕ್ರಮಗಳನ್ನು ಕೈಗೊಂಡಿರುವುದರ ಹೊರತಾಗಿಯೂ, ದೇಶದಲ್ಲಿ ನಗದು ಚಲಾವಣೆಯು ಶೇ 17ರಷ್ಟು ಏರಿಕೆ ದಾಖಲಿಸಿದೆ.

ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ₹ 21.10 ಲಕ್ಷ ಕೋಟಿ ಮೊತ್ತದ ನೋಟುಗಳು ಚಲಾವಣೆಯಲ್ಲಿದ್ದವು ಎಂದು ಆರ್ಬಿಐನ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

₹ 500 ಮುಖಬೆಲೆಯ ನೋಟುಗಳ ಚಲಾವಣೆ ಗರಿಷ್ಠ ಮಟ್ಟದಲ್ಲಿದೆ. ಒಟ್ಟಾರೆ ಚಲಾವಣೆಯಲ್ಲಿ ಇರುವ ನೋಟುಗಳಲ್ಲಿ ಇವುಗಳ ಪ್ರಮಾಣ ಶೇ 51ರಷ್ಟಿದೆ.

ನಕಲಿ ನೋಟು ಪತ್ತೆ ಪ್ರಕರಣಗಳು ಕಡಿಮೆಯಾಗಿದ್ದು, 3.17 ಲಕ್ಷ ನಕಲಿ ನೋಟುಗಳು ಪತ್ತೆಯಾಗಿವೆ. 2018ರಲ್ಲಿ 5.22 ಲಕ್ಷ ನಕಲಿ ನೋಟು ದೊರೆತಿದ್ದವು. ನೋಟು ಮುದ್ರಣ ವೆಚ್ಚವು ₹ 4,911 ಕೋಟಿಗಳಿಂದ ₹ 4,811 ಕೋಟಿಗೆ ಇಳಿದಿದೆ.

ನಗದು ಬಳಕೆ ತಗ್ಗಿಸುವುದು ಮತ್ತು ಡಿಜಿಟಲ್ ಪಾವತಿ ಉತ್ತೇಜಿಸುವುದು 2016ರ ನವೆಂಬರ್ 8ರಂದು ಘೋಷಿಸಿದ್ದ ನೋಟು ರದ್ದತಿಯ ಉದ್ದೇಶಗಳಲ್ಲಿ ಒಂದಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.