ಭಾನುವಾರ, ಏಪ್ರಿಲ್ 5, 2020
19 °C

ನಿರಾಶೆ ಮೂಡಿಸಿರುವ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಐಪಿಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಎಸ್‌ಬಿಐ ಕಾರ್ಡ್ಸ್‌ ಆ್ಯಂಡ್‌ ಪೇಮೆಂಟ್ಸ್‌ನ ಆರಂಭಿಕ ಸಾರ್ವಜನಿಕ ಕೊಡುಗೆಯಲ್ಲಿ (ಐಪಿಒ) ಹಣ ತೊಡಗಿಸಿದವರಲ್ಲಿ ಈಗ ನಿರಾಶೆ ಮನೆ ಮಾಡಿದೆ.

ಷೇರುಪೇಟೆಗಳಲ್ಲಿ ಕಂಡು ಬಂದಿರುವ ಭಾರಿ ಕುಸಿತ ಮತ್ತು ಷೇರುಪೇಟೆಯಲ್ಲಿ ವಹಿವಾಟು ನಡೆಸುವುದಕ್ಕೂ ಮೊದಲು ನಡೆದಿರುವ ಎಸ್‌ಬಿಐ ಕಾರ್ಡ್ಸ್‌ ಷೇರುಗಳ ಅನಧಿಕೃತ ಖರೀದಿ ಮತ್ತು ಮಾರಾಟ ವಹಿವಾಟಿನ ಬೆಲೆಯಲ್ಲಿ ಕುಸಿತ ಕಂಡು ಬಂದಿರುವುದು ‘ಐಪಿಒ’ ಹೂಡಿಕೆದಾರರಲ್ಲಿ ಚಿಂತೆ ಮೂಡಿಸಿದೆ.

₹ 750ರಿಂದ ₹ 755ರ ಬೆಲೆಮಟ್ಟದಲ್ಲಿದ್ದ ಐಪಿಒ, ಅನಧಿಕೃತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ (₹ 755 ರಿಂದ ₹ 775) ವಹಿವಾಟು ನಡೆಸಿದೆ.

ಹೂಡಿಕೆದಾರರು ದೊಡ್ಡ ಮೊತ್ತಕ್ಕೆ ‘ಐಪಿಒ’ ಖರೀದಿಸಲು ಮುಂದಾಗಿ ಕೈತುಂಬ ಲಾಭ ಬಾಚಿಕೊಳ್ಳುವ ನಿರೀಕ್ಷೆಯಲ್ಲಿದ್ದರು. ಅನೇಕರು ತಮಗೆ ‘ಐಪಿಒ’ ಹಂಚಿಕೆಯಾಗದೆ ಹಣ ಮರಳಿದರೆ ಸಾಕು ಎಂದು ಹಂಬಲಿಸುತ್ತಿದ್ದಾರೆ. ಇದೇ 16ಕ್ಕೆ ಷೇರುಪೇಟೆಯಲ್ಲಿ ವಹಿವಾಟಿಗೆ ಚಾಲನೆ ಸಿಗುವ ನಿರೀಕ್ಷೆ ಇದೆ. ಈಗಾಗಲೇ ಹಂಚಿಕೆ ಪ್ರಕ್ರಿಯೆಯು ಪೂರ್ಣಗೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು