ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ವಾರ್ಷಿಕ ರಿಟರ್ನ್ಸ್‌ ಸಲ್ಲಿಕೆಯ ಗಡುವು ವಿಸ್ತರಿಸಿದ ಕೇಂದ್ರ

2017–18ನೇ ಸಾಲಿನ ಗಡುವು ಡಿ. 31ಕ್ಕೆ, 2018–19ರ ಗಡುವು 2020ರ ಮಾ. 31ರವರೆಗೆ ವಿಸ್ತರಣೆ
Last Updated 14 ನವೆಂಬರ್ 2019, 14:22 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ವಾರ್ಷಿಕ ರಿಟರ್ನ್ಸ್‌ ಸಲ್ಲಿಕೆಯ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿ ತೆರಿಗೆದಾರರಿಗೆ ಅನುಕೂಲತೆ ಕಲ್ಪಿಸಿದೆ.

ಹಣಕಾಸು ವರ್ಷ 2017–18ನೇ ಸಾಲಿನ ಗಡುವನ್ನು ಡಿಸೆಂಬರ್‌ 31ಕ್ಕೆ ಮತ್ತು 2018–19ನೇ ಸಾಲಿನ ಗಡುವನ್ನು 2020ರ ಮಾರ್ಚ್‌ 31ರವರೆಗೆ ವಿಸ್ತರಿಸಲಾಗಿದೆ. ರಿಟರ್ನ್ಸ್‌ಗಳ ಹೊಂದಾಣಿಕೆಯ ಹೇಳಿಕೆ ದಾಖಲಿಸುವ ದಿನವನ್ನು ಕೂಡ ವಿಸ್ತರಿಸಲಾಗಿದೆ.

ಸರಳೀಕರಣ: ಇದರ ಜತೆಗೆ, ಎರಡು ಜಿಎಸ್‌ಟಿ ಅರ್ಜಿ ನಮೂನೆಗಳನ್ನು ಸಲ್ಲಿಸುವುದನ್ನು ಸರಳಗೊಳಿಸಲಾಗಿದೆ. ಈ ಫಾರ್ಮ್‌ಗಳಲ್ಲಿನ ಅನೇಕ ವಿವರಗಳನ್ನು ಭರ್ತಿ ಮಾಡುವುದನ್ನು ಐಚ್ಛಿಕಗೊಳಿಸಲಾಗಿದೆ ಎಂದು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಹೇಳಿಕೆಯಲ್ಲಿ ತಿಳಿಸಿದೆ.

‘ಜಿಎಸ್‌ಟಿಆರ್‌–9’ (ವಾರ್ಷಿಕ ರಿಟರ್ನ್‌) ಮತ್ತು ವಹಿವಾಟಿನ ಲೆಕ್ಕಪತ್ರದ ಅಂಕಿ ಅಂಶಗಳು ಮತ್ತು ತೆರಿಗೆ ಲೆಕ್ಕಪತ್ರ ಸಲ್ಲಿಕೆಯ ವಿವರಗಳನ್ನು (ರಿಟರ್ನ್ಸ್‌) ಹೊಂದಾಣಿಕೆ ಮಾಡುವ ಹೇಳಿಕೆಯಾಗಿರುವ ‘ಜಿಎಸ್‌ಟಿಆರ್‌–9ಸಿ’ ಫಾರ್ಮ್‌ ಸಲ್ಲಿಸುವ ಗಡುವು ವಿಸ್ತರಿಸಲಾಗಿದೆ. ಈ ಮೊದಲಿನ ಗಡುವು ಕ್ರಮವಾಗಿ ನವೆಂಬರ್‌ 30 ಮತ್ತು ಡಿಸೆಂಬರ್‌ 31 ಆಗಿತ್ತು.

ಗಡುವು ವಿಸ್ತರಣೆಯಿಂದ ಜಿಎಸ್‌ಟಿ ತೆರಿಗೆದಾರರು ಈ ಎರಡೂ ಫಾರ್ಮ್‌ಗಳನ್ನು ಕಾಲಮಿತಿ ಒಳಗೆ ಸಲ್ಲಿಸುವ ನಿರೀಕ್ಷೆ ಇದೆ ಎಂದು ‘ಸಿಬಿಐಸಿ’ ತಿಳಿಸಿದೆ. ಈ ಫಾರ್ಮ್‌ಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ತೆರಿಗೆದಾರರು ಆಕ್ಷೇಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT