ನವದೆಹಲಿ: ‘ಗಿಗ್ ಮಾದರಿಯ ಕೆಲಸವು ಡೆಲಿವರಿ ಪಾಲುದಾರರ ಮೇಲೆ ಯಾವುದೇ ಒತ್ತಡ ಹಾಕುತ್ತಿಲ್ಲ. ಡೆಲಿವರಿ ಪಾಲುದಾರರು ತಮಗೆ ಅನುಕೂಲವಾದ ವೇಳೆಯಲ್ಲಿ ಸರಕುಗಳನ್ನು ಗ್ರಾಹಕರಿಗೆ ತಲುಪಿಸುತ್ತಾರೆ, ಗಿಗ್ ಕೆಲಸವು ಅನೇಕರಿಗೆ ವಿಶ್ವಾಸಾರ್ಹ ಆದಾಯ ಮೂಲವಾಗಿದೆ’ ಎಂದು ಎಟರ್ನಲ್ ಕಂಪನಿಯ ಸ್ಥಾಪಕ ದೀಪಿಂದರ್ ಗೋಯಲ್ ಹೇಳಿದ್ದಾರೆ.

ಎಟರ್ನಲ್ ಮಾಲೀಕತ್ವದ ಜೊಮಾಟೊ ಮತ್ತು ಬ್ಲಿಂಕಿಟ್, ತಮ್ಮ ಡೆಲಿವರಿ ಪಾಲುದಾರರಿಗೆ 2025ರಲ್ಲಿ ವಿಮಾ ರಕ್ಷಣೆ ಕಲ್ಪಿಸಲು ₹100 ಕೋಟಿಗೂ ಹೆಚ್ಚು ಖರ್ಚು ಮಾಡಿವೆ.

ಕಳೆದ ವರ್ಷದಲ್ಲಿ ಜೊಮಾಟೊ ಡೆಲಿವರಿ ಪಾಲುದಾರರು ಟಿಪ್ಸ್ ಹೊರತುಪಡಿಸಿ ಸರಾಸರಿ ಪ್ರತಿ ಗಂಟೆಗೆ ತಲಾ ₹102 ಗಳಿಸಿದ್ದಾರೆ. ಇದು 2024ರಲ್ಲಿ ₹92ರಷ್ಟು ಇತ್ತು. ವರ್ಷದಿಂದ ವರ್ಷಕ್ಕೆ ಗಳಿಕೆಯು ಶೇ 10.9ರಷ್ಟು ಹೆಚ್ಚಳವಾಗಿದೆ ಎಂದು ಗೋಯಲ್ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

‘ನಮ್ಮ ವೇದಿಕೆಯಲ್ಲಿ ಡೆಲಿವರಿ ಪಾಲುದಾರರು ಅತಿ ಎನ್ನಿಸುವ ಬಗೆಯಲ್ಲಿ ಕೆಲಸ ಮಾಡಿಲ್ಲ. ಜೊಮಾಟೊದಲ್ಲಿ ವರ್ಷವೊಂದಕ್ಕೆ ಸರಾಸರಿ 38 ದಿನ ಕೆಲಸ ಮಾಡಿದ್ದಾರೆ. ಶೇ 2.3ರಷ್ಟು ಪಾಲುದಾರರು ಮಾತ್ರ ವರ್ಷದಲ್ಲಿ 250ಕ್ಕೂ ಹೆಚ್ಚು ದಿನ ಕೆಲಸ ಮಾಡಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

ಹೆಚ್ಚಿನ ಪಾಲುದಾರರು ತಿಂಗಳಿನಲ್ಲಿ ಕೆಲವು ದಿನ ಮಾತ್ರ ಕೆಲಸ ಮಾಡುತ್ತಿದ್ದಾರೆ. ಯಾರಾದರೂ ಪ್ರತಿನಿತ್ಯ 10 ಗಂಟೆಯಂತೆ ತಿಂಗಳಿನಲ್ಲಿ 26 ದಿನ ಕೆಲಸ ಮಾಡಿದರೆ ₹26,500 ಗಳಿಸಬಹುದು. ವಾಹನದ ಪೆಟ್ರೋಲ್ ಮತ್ತು ನಿರ್ವಹಣೆಗೆ ಶೇ 20ರಷ್ಟು ಖರ್ಚು ಮಾಡಿದರೂ, ₹21 ಸಾವಿರ ಉಳಿಸಬಹುದು ಎಂದು ಹೇಳಿದ್ದಾರೆ.

10 ನಿಮಿಷಗಳಲ್ಲಿ ಗ್ರಾಹಕನ ಮನೆ ಬಾಗಿಲಿಗೆ ಸರಕುಗಳನ್ನು ತಲುಪಿಸಲಾಗುತ್ತದೆ ಎಂಬ ಭರವಸೆಯು ಡೆಲಿವರಿ ಪಾಲುದಾರರ ಮೇಲೆ ಒತ್ತಡ ಬೀರುವುದಿಲ್ಲ ಎಂದಿದ್ದಾರೆ.

ಆದರೆ, 10 ನಿಮಿಷಗಳಲ್ಲಿ ಸರಕು ಪೂರೈಸುವ ಧಾವಂತದಲ್ಲಿ ಹಲವು ಡೆಲಿವರಿ ಪಾಲುದಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಹಲವರು ‘ಎಕ್ಸ್’ ಮೂಲಕ ಆರೋಪಿಸಿದ್ದಾರೆ.

ಗಿಗ್ ಕಾರ್ಮಿಕರ ಒಕ್ಕೂಟವು ಉತ್ತಮ ವೇತನ, ಕೆಲಸದ ಸ್ಥಿತಿಯಲ್ಲಿ ಸುಧಾರಣೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಹೊತ್ತಿನಲ್ಲಿ ದೀಪಿಂದರ್ ಅವರ ಹೇಳಿಕೆ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.