ಬುಧವಾರ, ಜುಲೈ 28, 2021
25 °C

ನಕಲಿ ಜಾಲತಾಣದ ಮೂಲಕ ವಂಚನೆ: ರಫ್ತು, ಆಮದುದಾರರಿಗೆ ಡಿಜಿಎಫ್‌ಟಿ ಎಚ್ಚರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನಕಲಿ ಜಾಲತಾಣಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ವಿದೇಶಿ ವ್ಯಾಪಾರಗಳ ಮಹಾನಿರ್ದೇಶನಾಲಯವು (ಡಿಜಿಎಫ್‌ಟಿ) ರಫ್ತು ಮತ್ತು ಆಮದು ವಹಿವಾಟುದಾರರಿಗೆ ಎಚ್ಚರಿಕೆ ನೀಡಿದೆ.

ವಂಚಿಸಲು ಡಿಜಿಎಫ್‌ಟಿ ಜಾಲತಾಣದಂತೆಯೇ ಕಾಣುವ ನಕಲಿ ಜಾತಲಾಣಗಳನ್ನು ಸೃಷ್ಟಿಸಿ ಅದರ ಮೂಲಕ ವಹಿವಾಟುದಾರರನ್ನು ದಿಕ್ಕು ತಪ್ಪಿಸುವ ಜತೆಗೆ ವಹಿವಾಟಿಗೆ ಸಂಬಂಧಿತ ಆಂತರಿಕ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಡಿಜಿಎಫ್‌ಟಿ ಹೆಸರಿನ ನಕಲಿ ಇ–ಮೇಲ್‌ ಐಡಿಗಳ ಮೂಲಕವೂ ವಹಿವಾಟುದಾರರಿಂದ ಮಾಹಿತಿಗಳನ್ನು ಕದಿಯುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಇಂತಹ ಜಾಲತಾಣಗಳಲ್ಲಿ ಮಾಹಿತಿಗಳನ್ನು ಹಂಚಿಕೊಳ್ಳುವ ಅಥವಾ ಯಾವುದೇ ರೀತಿಯ ಪಾವತಿ ನಡೆಸದೇ ಇರುವಂತೆ ಸೂಚನೆ ನೀಡಿದೆ.

ಮರುಪಾವತಿ ಮಾಡುವುದಾಗಿ ಹೇಳಿಕೊಂಡು ಡಿಜಿಎಫ್‌ಟಿ ಹೆಸರಿನಲ್ಲಿ ಇ–ಮೇಲ್‌ ಕಳುಹಿಸಿ ಮಾಹಿತಿ ದೋಚಲಾಗುತ್ತಿದೆ. ಆಮದು ಮತ್ತು ರಫ್ತು ವಹಿವಾಟಿಗೆ ಸಂಬಂಧಿಸಿದ ಕೋಡ್‌ಗಳನ್ನೂ ಪಡೆದು ವಂಚಿಸಲಾಗುತ್ತಿದೆ ಎಂದು ತಿಳಿಸಿದೆ.

ಕೆಲವು ನಕಲಿ ಜಾಲತಾಣಗಳು ‘.org’, ‘.in’ ಮತ್ತು ‘.com’ ಡೊಮೈನ್‌ ಹೆಸರನ್ನು ಹೊಂದಿವೆ. 

dgftemail.nic.in, contact@dgft-in.email.im1@dgftcom-in-icu, info@in-gov.email, dgft3@mail-govt.email ಹೆಸರಿನಲ್ಲಿ ಇ–ಮೇಲ್‌ ಬಂದಿರುವುದಾಗಿ ರಫ್ತುದಾರರು ಮತ್ತು ಆಮದುದಾರರು ಡಿಜಿಎಫ್‌ಟಿಗೆ ತಿಳಿಸಿದ್ದಾರೆ. ಇವುಗಳು ಸರ್ಕಾರದ ಇ–ಮೇಲ್‌ ವಿಳಾಸಕ್ಕೆ ಹೋಲುವಂತಿದ್ದು, ದಾರಿ ತಪ್ಪಿಸುತ್ತಿವೆ ಎಂದು ಮಹಾನಿರ್ದೇಶನಾಲಯವು ತಿಳಿಸಿದೆ.

ಈ ರೀತಿಯ ಮೇಲ್‌ ಬಂದರೆ ಉಚಿತ ಸಹಾಯವಾಣಿ 1800–111–550ಗೆ ಅಥವಾ dgftedi@nic.in ಗೆ ಮಾಹಿತಿ ನೀಡುವಂತೆ‌ ವಹಿವಾಟುದಾರರಿಗೆ ಸೂಚನೆ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು