ಮಂಗಳವಾರ, ಆಗಸ್ಟ್ 9, 2022
20 °C

100 ರೂಪಾಯಿ ಗಡಿ ದಾಟಿದ ಡೀಸೆಲ್ ದರ..!

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಶನಿವಾರ ಹೆಚ್ಚಿಸಿದ್ದು, ಡೀಸೆಲ್ ಬೆಲೆಯು ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಲೀಟರ್‌ಗೆ ₹ 100ರ ಗಡಿಯನ್ನು ದಾಟಿದೆ. ಪೆಟ್ರೋಲ್ ಬೆಲೆ 27 ಪೈಸೆ, ಡೀಸೆಲ್ ಬೆಲೆ 23 ಪೈಸೆ ಜಾಸ್ತಿ ಆಗಿದೆ.

ಮೇ 4ರ ನಂತರ ಆಗಿರುವ 23ನೆಯ ದರ ಏರಿಕೆ ಇದು. ದೆಹಲಿಯಲ್ಲಿ ಪೆಟ್ರೋಲ್ ದರ ₹ 96.12, ಡೀಸೆಲ್ ದರ ₹ 86.98 ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ₹ 99.39, ಡೀಸೆಲ್ ಬೆಲೆ ₹ 92.27 ಆಗಿದೆ.

ಪೆಟ್ರೋಲ್ ಬೆಲೆಯು ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ₹ 100 ಗಡಿ ದಾಟಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು