ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈನಲ್ಲಿ ಪೆಟ್ರೋಲ್‌ ದರ ₹100ರ ಸನಿಹ, ದೆಹಲಿಯಲ್ಲಿ ಡೀಸೆಲ್‌ ₹84

Last Updated 23 ಮೇ 2021, 7:04 IST
ಅಕ್ಷರ ಗಾತ್ರ

ನವದೆಹಲಿ: ಭಾನುವಾರ ಸಹ ಇಂಧನ ದರ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಡೀಸೆಲ್‌ ದರ ಪ್ರತಿ ಲೀಟರ್‌ಗೆ ₹84 ದಾಟಿದೆ. ಮುಂಬೈನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ ₹100 ಸಮೀಪಿಸಿದೆ.

ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ದರ ಸೂಚನೆಗಳ ಪ್ರಕಾರ, ಪೆಟ್ರೋಲ್‌ ಪ್ರತಿ ಲೀಟರ್‌ಗೆ 17 ಪೈಸೆ ಮತ್ತು ಡೀಸೆಲ್‌ ಪ್ರತಿ ಲೀಟರ್‌ಗೆ 29 ಪೈಸೆಯಷ್ಟು ಹೆಚ್ಚಳವಾಗಿದೆ. ಈ ತಿಂಗಳು 12ನೇ ಬಾರಿಗೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಾಗಿದ್ದು, ದೇಶದಾದ್ಯಂತ ಸಾರ್ವಕಾಲಿಕ ಹೆಚ್ಚಿನ ದರ ದಾಖಲಾಗಿದೆ.

ದೆಹಲಿಯಲ್ಲಿ ಪೆಟ್ರೋಲ್‌ ಪ್ರತಿ ಲೀಟರ್‌ಗೆ ₹93.21 ಮತ್ತು ಡೀಸೆಲ್‌ ₹84.07 ಮುಟ್ಟಿದೆ. ಈಗಾಗಲೇ ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಪೆಟ್ರೋಲ್‌ ದರ ₹100 ದಾಟಿದೆ. ಇದೀಗ ಮುಂಬೈನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ₹99.49 ಮತ್ತು ಡೀಸೆಲ್‌ ₹91.30 ಆಗಿದೆ.

ರಾಜ್ಯವಾರ ವ್ಯಾಟ್‌ ಆಧಾರದ ಮೇಲೆ ತೈಲ ದರದಲ್ಲಿ ವ್ಯತ್ಯಾಸವಿದೆ. ರಾಜಸ್ಥಾನದಲ್ಲಿ ಪೆಟ್ರೋಲ್ ಮೇಲೆ ದೇಶದಲ್ಲಿಯೇ ಅತಿ ಹೆಚ್ಚು ವ್ಯಾಟ್‌ ವಿಧಿಸಲಾಗುತ್ತಿದೆ. ಅಲ್ಲಿನ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹104.18 ಮತ್ತು ಡೀಸೆಲ್‌ ದರ ₹96.91 ಆಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹96.31 ಮತ್ತು ಡೀಸೆಲ್‌ ದರ ₹89.12 ತಲುಪಿದೆ.

ತೈಲ ಕಂಪನಿಗಳು ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ನಿತ್ಯವೂ ಪರಿಷ್ಕರಿಸುತ್ತವೆ. 12 ಬಾರಿ ಏರಿಕೆಯಿಂದ ಲೀಟರ್‌ ಪೆಟ್ರೋಲ್‌ ದರ ₹2.81ರಷ್ಟು ಮತ್ತು ಡೀಸೆಲ್‌ ದರ ₹3.34ರಷ್ಟು ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT