ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತತ 15ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ

ಎರಡು ವಾರಗಳಲ್ಲಿ ಒಟ್ಟು ಡೀಸೆಲ್‌ ₹8.88 ಹಾಗೂ ಪೆಟ್ರೋಲ್ ₹7.97 ಏರಿಕೆ
Last Updated 21 ಜೂನ್ 2020, 5:53 IST
ಅಕ್ಷರ ಗಾತ್ರ

ನವದೆಹಲಿ: ಸತತ 15ನೇ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಭಾನುವಾರ ಡೀಸೆಲ್‌ ಪ್ರತಿ ಲೀಟರ್‌ಗೆ 60 ಪೈಸೆ ಹಾಗೂ ಪೆಟ್ರೋಲ್ ಪ್ರತಿ ಲೀಟರ್‌ಗೆ 35 ಪೈಸೆ ಏರಿಕೆ ದಾಖಲಿಸಿವೆ. ಕಳೆದ ಎರಡು ವಾರಗಳ ಅವಧಿಯಲ್ಲಿ ಒಟ್ಟಾರೆಯಾಗಿ ಡೀಸೆಲ್‌ ₹8.88 ಹಾಗೂ ಪೆಟ್ರೋಲ್ ₹7.97 ಏರಿಕೆ ಕಂಡಿವೆ.

ದೆಹಲಿಯಲ್ಲಿ ಪೆಟ್ರೋಲ್ ದರ ₹79.23, ಡೀಸೆಲ್ ದರ ₹77.67 ದಾಖಲಾಗಿದೆ.ಮುಂಬೈನಲ್ಲಿ ಪೆಟ್ರೋಲ್ ದರ ₹86.06 ಇದ್ದರೆ, ಡೀಸೆಲ್ ದರ ₹76.69 ಆಗಿದೆ. ಸ್ಥಳೀಯ ತೆರಿಗೆ ಆಧರಿಸಿ ಈ ದರಗಳು ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗಲಿವೆ.

ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಎರಡನೇ ಮೂರರಷ್ಟು ತೆರಿಗೆ ಸೇರಿದೆ. ಪೆಟ್ರೋಲ್‌ಗೆ ಕೇಂದ್ರದ ತೆರಿಗೆ ₹32.98 ಹಾಗೂ ಸ್ಥಳೀಯ ಮಾರಾಟ ತೆರಿಗೆ ₹17.71 ಸೇರಿ ₹50.69 ಹೆಚ್ಚುವರಿ ಹೊರೆ ಗ್ರಾಹಕನ ಮೇಲೆ ಬೀಳುತ್ತಿದೆ. ಡೀಸೆಲ್ ಮಾರಾಟದಲ್ಲಿ ಶೇ 63ರಷ್ಟು ತೆರಿಗೆ ಒಳಗೊಂಡಿದೆ. ₹31.83 ಕೇಂದ್ರದ ತೆರಿಗೆ ಹಾಗೂ ₹17.69 ಸ್ಥಳೀಯ ತೆರಿಗೆ ಸೇರಿ ₹49.43 ಒಟ್ಟಾರೆ ಹೊರೆ ಬೀಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT