ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉತ್ಪನ್ನಗಳ ದೇಶ ತಿಳಿಸಿ’

Last Updated 16 ಜುಲೈ 2020, 15:36 IST
ಅಕ್ಷರ ಗಾತ್ರ

ನವದೆಹಲಿ: ಮಾರಾಟಕ್ಕೆ ಇಟ್ಟಿರುವ ವಸ್ತುಗಳು ಯಾವ ದೇಶದಿಂದ ಬಂದವು ಎನ್ನುವ ಮಾಹಿತಿ ನೀಡುವ ವ್ಯವಸ್ಥೆಯು ಆಗಸ್ಟ್‌ 10ರೊಳಗೆ ಜಾರಿಗೆ ಬರಬೇಕು ಎಂದು ಅಮೆಜಾನ್‌ ಕಂಪನಿಯ ಭಾರತದ ಘಟಕವು ತನ್ನ ಇ–ಮಾರುಕಟ್ಟೆ ಮೂಲಕ ವಸ್ತುಗಳನ್ನು ಮಾರಾಟ ಮಾಡುವವರಿಗೆ ಸೂಚನೆ ನೀಡಿದೆ.

ಭಾರತ ಮತ್ತು ಚೀನಾ ಯೋಧರ ನಡುವೆ ನಡೆದ ಸಂಘರ್ಷ, ನಂತರ ಎರಡೂ ದೇಶಗಳು ಯೋಧರನ್ನು ವಾಸ್ತವ ನಿಯಂತ್ರಣ ರೇಖೆಯಿಂದ (ಎಲ್‌ಎಸಿ) ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿದ್ದರ ನಡುವೆ ಅಮೆಜಾನ್‌ ಈ ಸೂಚನೆ ರವಾನಿಸಿದೆ.

ಇ–ಕಾಮರ್ಸ್‌ ಜಾಲತಾಣಗಳು ತಮ್ಮ ಮೂಲಕ ಮಾರಾಟವಾಗುವ ವಸ್ತುಗಳು ಯಾವ ದೇಶದವು ಎಂಬುದನ್ನು ತಿಳಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿತ್ತು. ‘ಆಗಸ್ಟ್ 10ರೊಳಗೆ ಈ ಕೆಲಸ ಆಗದಿದ್ದರೆ, ನೀವು ಮಾರಾಟಕ್ಕೆ ಇಟ್ಟಿರುವ ವಸ್ತುಗಳ‌ ಪಟ್ಟಿಯನ್ನು ತಡೆಹಿಡಿಯುವುದೂ ಸೇರಿದಂತೆ, ಕೆಲವು ಕ್ರಮಗಳನ್ನು ಜರುಗಿಸಬೇಕಾಗಬಹುದು’ ಎಂದು ಅಮೆಜಾನ್ ಬುಧವಾರ ರವಾನಿಸಿರುವ ಇಮೇಲ್‌ನಲ್ಲಿ ಹೇಳಿದೆ.

ಮಾರಾಟಗಾರರು ನೀಡುವ ಮಾಹಿತಿ ಖಚಿತವಾಗಿರಬೇಕು ಎಂದೂ ಅಮೆಜಾನ್‌ ತಾಕೀತು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT