ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ವಿಶೇಷ: ದೇಶದ ಚಿಲ್ಲರೆ ಮಾರುಕಟ್ಟೆಗಳಲ್ಲಿ ₹3.75 ಲಕ್ಷ ಕೋಟಿ ವ್ಯಾಪಾರ

Published 13 ನವೆಂಬರ್ 2023, 14:10 IST
Last Updated 13 ನವೆಂಬರ್ 2023, 14:10 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಎಲ್ಲ ಚಿಲ್ಲರೆ ಮಾರುಕಟ್ಟೆಗಳಲ್ಲಿ ಹಬ್ಬದ ಋತುವಿನಲ್ಲಿ ಇಲ್ಲಿಯವರೆಗೆ ₹3.75 ಲಕ್ಷ ಕೋಟಿಗಳ ದಾಖಲೆ ವಹಿವಾಟು ನಡೆಸಿವೆ ಎಂದು ವರ್ತಕರ ಸಂಘ ಸಿಎಐಟಿ ಸೋಮವಾರ ತಿಳಿಸಿದೆ.

ಗೋವರ್ಧನ ಪೂಜೆ, ಭಾಯ್‌ದೂಜ್‌, ಛಾತ್‌ ಪೂಜೆ ಮತ್ತು ತುಳಸಿ ವಿವಾಹದಂತಹ ಪೂಜಾ ಕಾರ್ಯಕ್ರಮ ಇನ್ನೂ ನಡೆಯಬೇಕಾಗಿದೆ. ಇದರಿಂದ ಹೆಚ್ಚುವರಿಯಾಗಿ ₹50 ಸಾವಿರ ಕೋಟಿ ಮೌಲ್ಯದ ವ್ಯಾಪಾರ ನಡೆಯಬಹುದು ಎಂದು ಅಖಿಲ ಭಾರತ
ವರ್ತಕರ ಸಂಘ (ಸಿಎಐಟಿ) ತಿಳಿಸಿದೆ.

ಈ ದೀಪಾವಳಿಯಲ್ಲಿ ಭಾರತೀಯ ಉತ್ಪನ್ನಗಳೇ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿವೆ ಎಂದು ಸಿಎಐಟಿ ತಿಳಿಸಿದೆ.

ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಖಂಡೇಲ್ವಾಲ್‌ ಮಾತನಾಡಿ, ದೀಪಾವಳಿ ಋತುವಿನಲ್ಲಿ ಚೀನಾದ ಸರಕುಗಳು ₹1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವ್ಯಾಪಾರವನ್ನು ಕಳೆದುಕೊಂಡಿವೆ. ಹಿಂದಿನ ವರ್ಷಗಳಲ್ಲಿ ಚೀನಾ ಉತ್ಪನ್ನಗಳು ದೀಪಾವಳಿ ಮಾರುಕಟ್ಟೆಯ ಶೇ 70ರಷ್ಟನ್ನು ಆಕ್ರಮಿಸಿಕೊಂಡಿರುತ್ತಿದ್ದವು. ಆದರೆ ಈ ವರ್ಷ, ಈ ದೀಪಾವಳಿಯಲ್ಲಿ ಸ್ಥಳೀಯ ವಸ್ತುಗಳಿಗೆ ಆದ್ಯತೆ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಕರೆಯನ್ನು ಎಲ್ಲರೂ ಪಾಲಿಸಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT