ಇ–ಕಾಮರ್ಸ್‌ ಕರಡು ನೀತಿ: ಆಕ್ಷೇಪ ಸಲ್ಲಿಸಲು ಅವಕಾಶ

ಭಾನುವಾರ, ಜೂಲೈ 21, 2019
24 °C

ಇ–ಕಾಮರ್ಸ್‌ ಕರಡು ನೀತಿ: ಆಕ್ಷೇಪ ಸಲ್ಲಿಸಲು ಅವಕಾಶ

Published:
Updated:
Prajavani

ನವದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ಇ–ಕಾಮರ್ಸ್‌ ಕರಡು ನೀತಿ ಬಗ್ಗೆ ಇ–ರಿಟೇಲ್ ಕಂಪನಿಗಳು ತಮ್ಮ ಆಕ್ಷೇಪಗಳನ್ನು 10 ದಿನಗಳಲ್ಲಿ ಸಲ್ಲಿಸಲು ಸೂಚಿಸಲಾಗಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್ ಹಾಗೂ ಇ–ಕಾಮರ್ಸ್‌ ಮತ್ತು ತಂತ್ರಜ್ಞಾನ ಉದ್ದಿಮೆಯ ಪ್ರತಿನಿಧಿಗಳ ಮಧ್ಯೆ ಇಲ್ಲಿ ಸಭೆ ನಡೆದ ನಂತರ ಈ ಸೂಚನೆ ನೀಡಲಾಗಿದೆ. ಕರಡು ನೀತಿಯನ್ನು ಸಮರ್ಪಕವಾಗಿ ರೂಪಿಸಿಲ್ಲ ಎಂದು ಉದ್ದಿಮೆಯ ಪ್ರತಿನಿಧಿಗಳು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಇ–ಕಾಮರ್ಸ್ ನೀತಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿರುವಾಗಲೇ ಈ ಸಭೆ ನಡೆದಿದೆ. ಕರಡು ನೀತಿಗೆ ಬಹುರಾಷ್ಟ್ರೀಯ ಕಂಪನಿಗಳೂ ಆಕ್ಷೇಪ ದಾಖಲಿಸಿದ್ದವು.

ಇ–ಕಾಮರ್ಸ್‌ ಉದ್ದಿಮೆಯ ಪ್ರತಿಯೊಂದು ಕಳವಳವನ್ನು ಪರಿಗಣಿಸಲಾಗುವುದು. ಈ ಉದ್ದೇಶಕ್ಕೆ ತಮ್ಮೆಲ್ಲ ಅಹವಾಲುಗಳನ್ನು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಗೆ ಸಲ್ಲಿಸಲು ಗೋಯಲ್‌ ಮನವಿ ಮಾಡಿಕೊಂಡಿದ್ದಾರೆ.

ದತ್ತಾಂಶ ಸಂಗ್ರಹ: ದತ್ತಾಂಶ ಸಂಗ್ರಹದ  ಬಗ್ಗೆ ಭಾರತೀಯ ರಿಸರ್ವ್‌ ಬ್ಯಾಂಕ್ ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆಯೂ ಕಂಪನಿಗಳು ಕಳವಳ ವ್ಯಕ್ತಪಡಿಸಿವೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !