ಬೆಂಗಳೂರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಕಂಪನಿಯು ಡ್ರೋನ್‌ಡೆಕ್ ಕಾರ್ಪೊರೇಷನ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಡ್ರೋನ್‌ಡೆಕ್ ಅಭಿವೃದ್ಧಿಪಡಿಸಿರುವ, ಚೂಟಿ ಮೇಲ್‌ಬಾಕ್ಸ್ ತಯಾರಿಕೆಯಲ್ಲಿ ನೆರವು ನೀಡಲಿದೆ. ಬಿಇಎಲ್ ಜೊತೆಗಿನ ಸಹಭಾಗಿತ್ವದಲ್ಲಿ ತಯಾರಾಗುವ ಡ್ರೋನ್‌ಡೆಕ್ ಮೇಲ್‌ಬಾಕ್ಸ್‌ಅನ್ನು ವಿಶ್ವದಾದ್ಯಂತ ಮಾರಾಟಕ್ಕೆ ಬಳಸಿಕೊಳ್ಳಲಾಗುತ್ತದೆ.

ಡ್ರೋನ್‌ಡೆಕ್ ಮೇಲ್‌ಬಾಕ್ಸ್‌ಗಳು ಡ್ರೋನ್ ಮೂಲಕ ರವಾನೆ ಆಗುವ ವಸ್ತುಗಳನ್ನು ಸ್ವೀಕರಿಸುವಲ್ಲಿ,ಅವುಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳುವಲ್ಲಿ ನೆರವಾಗುತ್ತವೆ. ಇದು ಆಹಾರ, ಔಷಧ, ದಿನಸಿ ಮತ್ತು ಇತರ ವಸ್ತುಗಳ ಪಾರ್ಸೆಲ್ ಉದ್ಯಮದಲ್ಲಿ ದೊಡ್ಡ ಪರಿವರ್ತನೆ ತರಲಿದೆ ಎಂಬ ನಿರೀಕ್ಷೆ ಇದೆ.

ಡ್ರೋನ್‌ಡೆಕ್ ಜೊತೆಗಿನ ಒಪ್ಪಂದದ ವಿಚಾರವಾಗಿ ಸಂತಸ ಹಂಚಿಕೊಂಡಿರುವ ಬಿಇಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆನಂದಿ ರಾಮಲಿಂಗಂ, ‘ತಾಂತ್ರಿಕವಾಗಿ ನಾವು ಯಾವಾಗಲೂ ಹೆಚ್ಚಿನ ಸಾಧನೆ ತೋರುತ್ತಿದ್ದೇವೆ. ನಾವು ಹೊಸತನಗಳ ಕಂಪನಿಯಾಗಲು ಯಾವಾಗಲೂ ಬಯಸುತ್ತೇವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.