ಶನಿವಾರ, ಜೂನ್ 19, 2021
27 °C

ವಾಣಿಜ್ಯ ವಾಹನ: ಇ–ವೇ ಬಿಲ್ ಜೊತೆ ಆರ್‌ಎಫ್‌ಐಡಿ, ಫಾಸ್ಟ್‌ಟ್ಯಾಗ್‌ ಜೋಡಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇ–ವೇ ಬಿಲ್‌ ವ್ಯವಸ್ಥೆಯೊಂದಿಗೆ ಫಾಸ್ಟ್‌ಟ್ಯಾಗ್‌ ಮತ್ತು ಆರ್‌ಎಫ್‌ಐಡಿಯನ್ನು ಜೋಡಿಸಲಾಗಿದೆ. ಇದರಿಂದಾಗಿ ಜಿಎಸ್‌ಟಿ ಅಧಿಕಾರಿಗಳಿಗೆ ಹೆದ್ದಾರಿಗಳಲ್ಲಿ ಸರಕು ಸಾಗಣೆ ವಾಹನಗಳ ಚಲನವಲನಗಳ ಮೇಲೆ ನಿಗಾ ಇಡಲು, ಜಿಎಸ್‌ಟಿ ವಂಚನೆ ತಡೆಯಲು ಸಹಾಯ ಆಗಲಿದೆ.

ಜನವರಿ 1ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರವು ಆರ್‌ಎಫ್‌ಐಡಿ, ಫಾಸ್ಟ್‌ಟ್ಯಾಗ್‌ಅನ್ನು ಇ–ವೇ ಬಿಲ್ ಜೊತೆ ಜೋಡಿಸಿದೆ. ಸರಕು ಸಾಗಣೆದಾರರು ತಮ್ಮ ವಾಹನಗಳಲ್ಲಿ ಆರ್‌ಎಫ್‌ಐಡಿ ಹೊಂದಿರಬೇಕು. ಇ–ವೇ ಬಿಲ್‌ನ ವಿವರವನ್ನು ಆರ್‌ಎಫ್‌ಐಡಿಗೆ ಅ‍ಪ್ಲೋಡ್ ಮಾಡಲಾಗುತ್ತದೆ.

ತೆರಿಗೆ ಅಧಿಕಾರಿಗಳು ಬಳಸುವ ಇ–ವೇ ಬಿಲ್‌ ಮೊಬೈಲ್‌ ಆ್ಯಪ್‌ಗೆ ಹೆಚ್ಚುವರಿ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. ಇದರಿಂದಾಗಿ ಇ–ವೇ ಬಿಲ್ ಇಲ್ಲದೆ ಸಾಗುವ ವಾಹನಗಳ ಬಗ್ಗೆ ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ರವಾನೆ ಆಗುತ್ತದೆ. ಇ–ವೇ ಬಿಲ್‌ ಇಲ್ಲದೆಯೇ ಟೋಲ್‌ ಅನ್ನು ದಾಟುವ ವಾಹನಗಳನ್ನು ಕೆಲವೇ ಕ್ಷಣಗಳಲ್ಲಿ ಪತ್ತೆ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗಲಿದೆ.

ಸರಕು ಸಾಗಣೆ ವಾಹನವು ಹೆದ್ದಾರಿಗಳಲ್ಲಿ ಆರ್‌ಎಫ್‌ಐಡಿ ಟ್ಯಾಗ್‌ ಗುರುತಿಸುವ ಸಾಧನವನ್ನು ಹಾದುಹೋದಾಗ, ಅದರಲ್ಲಿ ಇರುವ ಇ–ವೇ ಬಿಲ್ ವಿವರವು ಸರ್ಕಾರದ ಜಾಲತಾಣಕ್ಕೆ ರವಾನೆ ಆಗುತ್ತದೆ. ಕಂದಾಯ ಅಧಿಕಾರಿಗಳು ಈ ವಿವರವನ್ನು ಜಿಎಸ್‌ಟಿ ವ್ಯವಸ್ಥೆಯಡಿ ನೋಂದಣಿ ಮಾಡಿಕೊಂಡ ವ್ಯಕ್ತಿಯು ಪೂರೈಸಿದ ಸರಕುಗಳ ವಿವರದ ಜೊತೆಗೆ ತಾಳೆ ಮಾಡಿ ನೋಡುತ್ತಾರೆ.

₹ 50 ಸಾವಿರಕ್ಕಿಂತ ಹೆಚ್ಚಿನ ಬೆಲೆಯ ಸರಕುಗಳ ಅಂತರರಾಜ್ಯ ಸಾಗಾಟಕ್ಕೆ ಇ–ವೇ ಬಿಲ್ ಕಡ್ಡಾಯ. ಆದರೆ, ಚಿನ್ನದ ಸಾಗಣೆಗೆ ಇದರಿಂದ ವಿನಾಯಿತಿ ಇದೆ. ವಾಣಿಜ್ಯ ಸಂಸ್ಥೆಗಳು ಮತ್ತು ಸರಕು ಸಾಗಣೆದಾರರು ಜಿಎಸ್‌ಟಿ ಇನ್‌ಸ್ಪೆಕ್ಟರ್‌ ಕೇಳಿದಾಗ ಇ–ವೇ ಬಿಲ್ ತೋರಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು