ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ದಕ್ಷಿಣ ಏಷ್ಯಾ ರಾಷ್ಟ್ರಗಳ ಮೇಲೆ ಆರ್ಥಿಕ ದುಷ್ಪರಿಣಾಮ

Last Updated 21 ನವೆಂಬರ್ 2020, 8:06 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಕೋವಿಡ್‌ನಿಂದಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳ ಮೇಲೆ ಆರ್ಥಿಕ ದುಷ್ಪರಿಣಾಮ ಹೆಚ್ಚಾಗಿದೆ ಎಂಬುದು ಅಮೆರಿಕದ ಸಂಶೋಧನಾ ವರದಿಯೊಂದರಿಂದ ತಿಳಿದುಬಂದಿದೆ.

ಪಾಕಿಸ್ತಾನದ ಹುಸೇನ್‌ ಹಕ್ಕಾನಿ ಹಾಗೂ ಅಪರ್ಣ ಪಾಂಡೆ ಅವರು ಜಂಟಿಯಾಗಿ ಹೊರ ತಂದಿರುವ ‘ನೈನ್‌ ಮಂಥ್ಸ್‌ ಆಫ್‌ ಕೋವಿಡ್‌–19: ದಿ ಇಂಪ್ಯಾಕ್ಟ್‌ ಆನ್‌ ಸೌತ್‌ ಏಷ್ಯಾ’ ಹೆಸರಿನ30 ಪುಟಗಳ ವರದಿಯನ್ನು ಹಡ್ಸನ್‌ ಇನ್‌ಸ್ಟಿಟ್ಯೂಟ್‌ ಥಿಂಕ್‌–ಟ್ಯಾಂಕ್‌ ಶುಕ್ರವಾರ ಪ್ರಕಟಿಸಿದೆ.

‘ಕೋವಿಡ್‌ ಕಾಲದಲ್ಲಿ ದಕ್ಷಿಣ ಏಷ್ಯಾ ರಾಷ್ಟ್ರಗಳು ಎದುರಿಸುತ್ತಿರುವ ಆರೋಗ್ಯ ಸವಾಲುಗಳಿಗಿಂತಲೂ ಈ ರಾಷ್ಟ್ರಗಳ ಮೇಲೆ ಉಂಟಾಗಿರುವ ಆರ್ಥಿಕ ದುಷ್ಪರಿಣಾಮ ಅಧಿಕವಾಗಿದೆ. ಈ ಸಾಂಕ್ರಾಮಿಕ ರೋಗವನ್ನು ಒಂದೊಂದು ರಾಷ್ಟ್ರವು ಒಂದೊಂದು ಬಗೆಯಲ್ಲಿ ಎದುರಿಸಿವೆ. ಈ ರಾಷ್ಟ್ರಗಳಲ್ಲಿ ವಾಸಿಸುವ ಜನರ ಪೈಕಿ ಬಹುತೇಕರು ಬಡತನ ರೇಖೆಗಿಂತ ಕೆಳಗಿದ್ದಾರೆ. ಈ ರಾಷ್ಟ್ರಗಳಲ್ಲಿ ಸರಿಯಾದ ಮೂಲ ಸೌಕರ್ಯಗಳೂ ಇಲ್ಲ’ ಎಂದು ಹುಸೇನ್‌ ಹೇಳಿದ್ದಾರೆ.

‘ಪಾಕಿಸ್ತಾನವು ಅಚ್ಚರಿಯ ರೀತಿಯಲ್ಲಿ ಕೊರೊನಾ ಸೋಂಕನ್ನು ನಿಯಂತ್ರಿಸಿತ್ತು. ಈ ದೇಶದಲ್ಲಿ ಮತ್ತೆ ಸೋಂಕು ಹರಡುವ ಅಪಾಯವಿದೆ. ಕೊರೊನಾದಿಂದಾಗಿ ಶ್ರೀಲಂಕಾದಲ್ಲಿ ಸಾಲದ ಬಿಕ್ಕಟ್ಟು ಉಲ್ಬಣಿಸಿದೆ. ಬಾಂಗ್ಲಾದೇಶ ಕೂಡ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ’ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT