ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‍ಡೌನ್ ಅವಧಿ ವಿಸ್ತರಿಸಿದರೆ ದೇಶದಲ್ಲಿ ಆರ್ಥಿಕ ಹರಾಕಿರಿ: ಆನಂದ್ ಮಹೀಂದ್ರಾ

Last Updated 11 ಮೇ 2020, 16:26 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‍ಡೌನ್‌ ಅವಧಿ ಮತ್ತಷ್ಟು ವಿಸ್ತರಿಸಿದರೆ ದೇಶದಲ್ಲಿ ಆರ್ಥಿಕ ಹರಾಕಿರಿಯುಂಟಾಗುತ್ತದೆ.ಲಾಕ್‍ಡೌನ್‌ನಿಂದಾಗಿ ಲಕ್ಷಗಟ್ಟಲೆ ಜನರ ಪ್ರಾಣ ಕಾಪಾಡಬಹುದು. ಆದರೆ ಅದು ಮುಂದುವರಿದರೆ ಸಮಾಜದಲ್ಲಿನ ದುರ್ಬಲ ವಿಭಾಗದವರಿಗೆ ತೀವ್ರ ಕಷ್ಟವಾಗುತ್ತದೆಎಂದು ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ ಹೇಳಿದ್ದಾರೆ.

ಇದೀಗ ಹೊಸ ಪ್ರಕರಣಗಳ ಸಂಖ್ಯೆ ಹಿಂದಿನ ದಿನಗಳಿಗಿಂತ ಹೆಚ್ಚುತ್ತಾ ಹೋಗುತ್ತಿದೆ. ಟೆಸ್ಟಿಂಗ್ ಜಾಸ್ತಿಯಾಗುತ್ತಿದ್ದರೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ತ್ವರಿತವಾಗಿ ಈ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತದೆ ಎಂಬುದನ್ನು ಸಾವು ನಿರೀಕ್ಷಿಸಬಾರದು ಎಂದು ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.ಅಂದರೆ ಲಾಕ್‌ಡೌನ್‌ನಿಂದ ಪ್ರಯೋಜನವಾಗಿಲ್ಲ ಎಂಬರ್ಥವಲ್ಲ.

ನಿರಂತರಹೋರಾಟದಿಂದ ಭಾರತ ಲಕ್ಷಗಟ್ಟಲೆ ಜನರ ಪ್ರಾಣ ಉಳಿಸಿದೆ. ವಿಶ್ವದ ಸಾವಿನ ಸಂಖ್ಯೆಯು ದಶಲಕ್ಷದಲ್ಲಿ ಸರಾಸರಿ 35 ಆಗಿದೆ, ಅಮೆರಿಕದಲ್ಲಿ 228. ಇದಕ್ಕೆ ಹೋಲಿಸಿದರೆ ಭಾರತದಲ್ಲಿ ಸಾವಿನ ಸಂಖ್ಯೆ ದಶಲಕ್ಷದಲ್ಲಿ 1.4 ಆಗಿದೆ. ನಾವು ಸಮಯೋಜಿತವಾಗಿ ವೈದ್ಯಕೀಯ ಸೌಕರ್ಯಗಳನ್ನೂ ಹೆಚ್ಚಿಸಿದೆವು.ಆದರೆ ಲಾಕ್‌ಡೌನ್ ವಿಸ್ತರಣೆಯಾದರೆ ದೇಶದಲ್ಲಿ ಆರ್ಥಿಕ ಹರಾಕಿರಿಯುಂಟಾಗುತ್ತದೆ.

ಕಾರ್ಯನಿರತ ಮತ್ತು ಅಭಿವೃದ್ಧಿ ಹೊಂದುವ ಆರ್ಥಿಕತೆಯು ದೈನಂದಿನ ಜೀವನದ ಪ್ರತಿರೋಧ ವ್ಯವಸ್ಥೆಯಾಗಿದೆ. ಲಾಕ್‍ಡೌನ್ ಈ ಪ್ರತಿರೋಧ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಸಮಾಜದಲ್ಲಿ ಹಲವಾರು ಮಂದಿಯ ಮೇಲೆ ಪರಿಣಾಮ ಬೀರುತ್ತದೆ.ದೇಶದ ಜನರು ಸಾಯುವುದನ್ನು ತಡೆಯಬೇಕು.ಆಕ್ಸಿಜನ್ ಲೈನ್ಸ್ ಹೊಂದಿರುವ ಆಸ್ಪತ್ರೆಗಳನ್ನು ನಿರ್ಮಿಸಬೇಕು, ಟೆಸ್ಟಿಂಗ್ ಮತ್ತು ಟ್ರೇಸಿಂಗ್ ತ್ವರಿತಗತಿಯಲ್ಲಿ ಮಾಡಬೇಕು. ಇದರೊಂದಿಗೆ ಕಂಟೈನ್‌ಮೆಂಟ್ ವಲಯವಾರು ಅಲ್ಲ, ಸಬ್ ಪಿನ್‍ಕೋಡ್ ಮಟ್ಟದಲ್ಲಿ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಹಿರಿಯರನ್ನು ಮತ್ತು ಬೇಗನೆ ರೋಗಕ್ಕೆ ತುತ್ತಾಗುವ ಜನರನ್ನು ಕಾಪಾಡಬೇಕು. ನಾವು ವೈರಸ್ ಜತೆಗೇ ಬದುಕಬೇಕು. ಅದು ಮುಕ್ತಾಯದ ಅವಧಿ ಇಟ್ಟುಕೊಂಡು ಪ್ರವಾಸಿ ವೀಸಾದಲ್ಲಿ ಇಲ್ಲಿಗೆ ಬಂದಿಲ್ಲ ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT