ಸೋಮವಾರ, ಜೂಲೈ 13, 2020
28 °C

ಮೂಲಸೌಕರ್ಯ ವಲಯ ಗರಿಷ್ಠ ಮಟ್ಟಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ಮೂಲಸೌಕರ್ಯ ವಲಯದ ಬೆಳವಣಿಗೆಯು ಫೆಬ್ರುವರಿಯಲ್ಲಿ ಶೇ 5.5ರಷ್ಟು ಬೆಳವಣಿಗೆ ದಾಖಲಿಸಿದ್ದು, ಇದು 11 ತಿಂಗಳ ಗರಿಷ್ಠ ಮಟ್ಟವಾಗಿದೆ.

ಈ ಹಿಂದೆ 2019ರ ಮಾರ್ಚ್‌ನಲ್ಲಿ ಶೇ 5.8ರಷ್ಟು ಬೆಳವಣಿಗೆ ಕಂಡಿತ್ತು. 2019ರ ಫೆಬ್ರುವರಿಯಲ್ಲಿ ಶೇ 2.2ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಶೇ 3.6ರಷ್ಟು ಏರಿಕೆಯಾಗಿದೆ.

ಎಂಟು ಮೂಲಸೌಕರ್ಯ ವಲಯಗಳ ಪೈಕಿ, ಕಲ್ಲಿದ್ದಲು, ತೈಲಾಗಾರ ಮತ್ತು ವಿದ್ಯುತ್‌ ವಲಯಗಳ ತಯಾರಿಕೆ ಹೆಚ್ಚಾಗಿರುವುದರಿಂದ ಉತ್ತಮ ಪ್ರಗತಿ ಸಾಧ್ಯವಾಗಿದೆ. 

ದೇಶದ ಕೈಗಾರಿಕಾ ಉತ್ಪಾದನಾ ಸೂಚ್ಯಂಕಕ್ಕೆ (ಐಐಪಿ) ಈ 8 ವಲಯಗಳು ಶೇ 4.027ರಷ್ಟು ಕೊಡುಗೆ ನೀಡುತ್ತಿವೆ. ಫೆಬ್ರುವರಿಯಲ್ಲಿನ ಬೆಳವಣಿಯು ಐಐಪಿ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಏಪ್ರಿಲ್‌–ಫೆಬ್ರುವರಿ ಅವಧಿಯಲ್ಲಿ ಶೇ 1ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 4.2ರಷ್ಟಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು