ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಾನಿಕ್ ಉಪಕರಣ ಬೆಲೆ ಏರಿಕೆ ಸಂಭವ: ಯಾವ್ಯಾವ ವಸ್ತುಗಳ ದರ ಹೆಚ್ಚಲಿದೆ?

Last Updated 12 ಮೇ 2022, 13:13 IST
ಅಕ್ಷರ ಗಾತ್ರ

ನವದೆಹಲಿ: ಟಿ.ವಿ., ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ಸೇರಿದಂತೆ ಗೃಹಬಳಕೆಯ ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆಯು ಈ ತಿಂಗಳ ಅಂತ್ಯಕ್ಕೆ ಅಥವಾ ಜೂನ್ ಮೊದಲ ವಾರದಲ್ಲಿ ಶೇಕಡ 3ರಿಂದ ಶೇ 5ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಉತ್ಪನ್ನಗಳ ತಯಾರಕರು ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಮುಂದಾಗಿದ್ದಾರೆ.

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವ ಕಾರಣ, ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆ ದುಬಾರಿ ಆಗಿರುವುದು ದೊಡ್ಡ ತಲೆನೋವಾಗಿದೆ ಎಂದು ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ತಯಾರಕರ ಸಂಘ (ಸಿಇಎಎಂಎ) ಹೇಳಿದೆ. ಚೀನಾದ ಶಾಂಘೈನಲ್ಲಿ ಕಠಿಣ ಲಾಕ್‌ಡೌನ್ ಜಾರಿಗೆ ತಂದಿದ್ದರಿಂದಾಗಿ, ಅಲ್ಲಿಂದ ಕೆಲವು ಬಿಡಿಭಾಗಗಳು ಸರಿಯಾಗಿ ಪೂರೈಕೆಯಾಗುತ್ತಿಲ್ಲ.

ಹವಾ ನಿಯಂತ್ರಕಗಳ ಬೆಲೆ ಕೂಡ ಜಾಸ್ತಿ ಆಗುವ ಸಾಧ್ಯತೆ ಇದೆ. ‘ಕಚ್ಚಾ ವಸ್ತುಗಳ ಬೆಲೆಯು ಈಗಾಗಲೇ ದುಬಾರಿ ಆಗುತ್ತಿದೆ. ಈಗ ರೂಪಾಯಿ ಮೌಲ್ಯವು ಕುಸಿಯುತ್ತಿದೆ. ಜೂನ್‌ ನಂತರ ಗ್ರಾಹಕರು ನೀಡಬೇಕಿರುವ ಬೆಲೆಯಲ್ಲಿ ಶೇ 3ರಿಂದ ಶೇ 5ರವರೆಗೆ ಏರಿಕೆ ಆಗಲಿದೆ’ ಎಂದು ಸಿಇಎಎಂಎ ಅಧ್ಯಕ್ಷ ಎರ್‍ರಿಕ್ ಬ್ರಗ್ಯಾಂಜಾ ಹೇಳಿದ್ದಾರೆ.

ಡಾಲರ್ ಎದುರು ರೂಪಾಯಿ ಮೌಲ್ಯವು 75ರ ಮಟ್ಟಕ್ಕೆ ಬಂದರೆ, ಬೆಲೆ ಏರಿಕೆಯ ಅಗತ್ಯ ಬರಲಿಕ್ಕಿಲ್ಲ ಎಂದು ಅವರು ಅಂದಾಜು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT