ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಗ್ಗಿದ ಎಂಜಿನಿಯರಿಂಗ್ ಸರಕುಗಳ ರಫ್ತು

Published 3 ಅಕ್ಟೋಬರ್ 2023, 14:22 IST
Last Updated 3 ಅಕ್ಟೋಬರ್ 2023, 14:22 IST
ಅಕ್ಷರ ಗಾತ್ರ

ಕೋಲ್ಕತ್ತ: ಜಾಗತಿಕ ಆರ್ಥಿಕತೆಯು ಮಂದಗತಿಯ ಬೆಳವಣಿಗೆ ಕಾಣುತ್ತಿರುವುದರಿಂದ ಭಾರತದ ಎಂಜಿನಿಯರಿಂಗ್‌ ಸರಕುಗಳ ರಫ್ತು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಎಂಜಿನಿಯರಿಂಗ್ ರಫ್ತು ಉತ್ತೇಜನ ಮಂಡಳಿ (ಇಇಪಿಸಿ) ಮಂಗಳವಾರ ತಿಳಿಸಿದೆ.

2023ರ ಏಪ್ರಿಲ್‌–ಆಗಸ್ಟ್‌ ಅವಧಿಯಲ್ಲಿ ಎಂಜಿನಿಯರಿಂಗ್‌ ರಫ್ತು ಶೇ 4.55ರಷ್ಟು ಇಳಿಕೆ ಕಂಡು ₹3.70 ಲಕ್ಷ ಕೋಟಿಗೆ ತಲುಪಿದೆ. 2022ರ ಏಪ್ರಿಲ್‌–ಆಗಸ್ಟ್ ಅವಧಿಯಲ್ಲಿ ₹3.87 ಲಕ್ಷ ಕೋಟಿ ಮೌಲ್ಯದ ವಹಿವಾಟು ನಡೆದಿತ್ತು.

ಮಂಡಳಿಯ ವಕ್ತಾರರ ಪ್ರಕಾರ, ರಷ್ಯಾ ದೇಶಕ್ಕೆ ರಫ್ತು ವಹಿವಾಟು 2022ರ ಏಪ್ರಿಲ್‌–ಆಗಸ್ಟ್ ಅವಧಿಗೆ ಹೋಲಿಸಿದರೆ 2023ರ ಏಪ್ರಿಲ್‌–ಆಗಸ್ಟ್ ಅವಧಿಯಲ್ಲಿ ಶೇ 178ರಷ್ಟು ಏರಿಕೆ ಕಂಡಿದೆ. ಮೌಲ್ಯದ ಲೆಕ್ಕದಲ್ಲಿ ₹16.93 ಲಕ್ಷ ಕೋಟಿಯಿಂದ ₹47.14 ಲಕ್ಷ ಕೋಟಿಗೆ ಏರಿಕೆ ಆಗಿದೆ.

ಜಾಗತಿಕ ಮಂದಗತಿಯ ಆರ್ಥಿಕ ಬೆಳವಣಿಗೆಯು ಅಮೆರಿಕ ಮತ್ತು ಐರೋಪ್ಯ ದೇಶಗಳ ಮೇಲೆ ಪರಿಣಾಮ ಬೀರಿದೆ. ಭಾರತವು ಈ ಪ್ರದೇಶಗಳೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ವಹಿವಾಟು ನಡೆಸುತ್ತಿದೆ ಎಂದು ಮಂಡಳಿ ತಿಳಿಸಿದೆ.

ರಷ್ಯಾ–ಉಕ್ರೇನ್‌ ಸಮರ, ಚೀನಾದ ಆರ್ಥಿಕ ಬೆಳವಣಿಗೆ ಇಳಿಕೆ ಆಗಿರುವುದು ಸಹ ಭಾರತದ ಎಂಜಿನಿಯರಿಂಗ್ ರಫ್ತು ಮೇಲೆ ಪರಿಣಾಮ ಬೀರುತ್ತಿದೆ ಎಂದು ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT