ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಕ್ವಿಟಿ ಎಂಎಫ್‌: ಮೇನಲ್ಲಿ ₹ 18,529 ಕೋಟಿ ಹೂಡಿಕೆ

Last Updated 9 ಜೂನ್ 2022, 13:12 IST
ಅಕ್ಷರ ಗಾತ್ರ

ನವದೆಹಲಿ: ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳು ಹೂಡಿಕೆದಾರರನ್ನು ನಿರಂತರವಾಗಿ ಆಕರ್ಷಿಸುತ್ತಿದ್ದು, ಇವುಗಳ ಮೂಲಕ ಮೇ ತಿಂಗಳಿನಲ್ಲಿ ₹ 18,529 ಕೋಟಿ ಬಂಡವಾಳ ಹೂಡಿಕೆ ಆಗಿದೆ.

ಷೇರುಪೇಟೆಯಲ್ಲಿನ ಅಸ್ಥಿರತೆ, ರಷ್ಯಾ–ಉಕ್ರೇನ್‌ ಸಂಘರ್ಷದಿಂದ ಉಂಟಾಗಿರುವ ಅನಿಶ್ಚಿತತೆ ಹಾಗೂ ಹಣದುಬ್ಬರ ಗರಿಷ್ಠ ಮಟ್ಟದಲ್ಲಿ ಇದ್ದರೂ ಹೂಡಿಕೆದಾರರು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ಏಪ್ರಿಲ್‌ನಲ್ಲಿ ₹ 15,890 ಕೋಟಿ ಹೂಡಿಕೆ ಆಗಿತ್ತು ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಗುರುವಾರ ತಿಳಿಸಿದೆ. 2021ರ ಮಾರ್ಚ್‌ ತಿಂಗಳಿನಿಂದಲೂ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಬಂಡವಾಳ ಒಳಹರಿವು ಕಂಡುಬರುತ್ತಿದೆ.

2020ರ ಜುಲೈನಿಂದ 2021ರ ಫೆಬ್ರುವರಿವರೆಗೆ ಒಟ್ಟಾರೆ ₹ 46,791 ಕೋಟಿ ಬಂಡವಾಳ ಹಿಂದಕ್ಕೆ ಪಡೆಯಲಾಗಿದೆ.

ವ್ಯವಸ್ಥಿತ ಹೂಡಿಕೆ ಯೋಜನೆಗಳಲ್ಲಿ (ಎಸ್‌ಐಪಿ) ಹೂಡಿಕೆ ಹೆಚ್ಚಾಗುತ್ತಿರುವುದರಿಂದ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಸಕಾರಾತ್ಮಕವಾಗಿದೆ. ಷೇರುಪೇಟೆಯಲ್ಲಿ ಸದ್ಯ ನಡೆಯುತ್ತಿರುವ ಏರಿಳಿತವನ್ನು ಗಮನಿಸಿದರೆ ಈಕ್ವಿಟಿ ಎಂಎಫ್‌ ಬಗ್ಗೆ ಹೂಡಿಕೆದಾರರ ಆಸಕ್ತಿಯು ಇದೇ ರೀತಿ ಮುಂದುವರಿಯಲಿದೆ ಎಂದು ಮೋತಿಲಾಲ್‌ ಓಸ್ವಾಲ್‌ ಎಎಂಸಿನ ಮುಖ್ಯ ವಹಿವಾಟು ಅಧಿಕಾರಿ ಅಖಿಲ್‌ ಚತುರ್ವೇದಿ ಹೇಳಿದ್ದಾರೆ.

ಎಸ್‌ಐಪಿ ಮೂಲಕ ಒಳಹರಿವು ಮೇನಲ್ಲಿ ₹ 11,863 ಕೋಟಿಯಿಂದ ₹ 12,286 ಕೋಟಿಗೆ ಏರಿಕೆ ಆಗಿದೆ. ಈಕ್ವಿಟಿ ಹೂಡಿಕೆಯಲ್ಲಿ ಸಣ್ಣ ಹೂಡಿಕೆದಾರರು ವಿಶ್ವಾಸ ಹೊಂದಿದ್ದಾರೆ ಎನ್ನುವುದನ್ನು ಇದು ಸೂಚಿಸುತ್ತಿದೆ. ಸತತ 9ನೇ ತಿಂಗಳಿನಲ್ಲಿಲ್ಲೂ ಪ್ರತಿ ತಿಂಗಳ ಎಸ್‌ಐಪಿ ಹೂಡಿಕೆಯು ₹ 10 ಸಾವಿರ ಕೋಟಿಯನ್ನು ದಾಟಿದೆ.

ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ₹ 203 ಕೋಟಿ ಹೂಡಿಕೆ ಆಗಿದೆ. ಸಾಲಪತ್ರಗಳಲ್ಲಿ ₹ 32,722 ಕೋಟಿ ಹೂಡಿಕೆ ಆಗಿದೆ.

ಮ್ಯೂಚುವಲ್ ಫಂಡ್‌ ನಿರ್ವಹಣಾ ಸಂಪತ್ತು (ಲಕ್ಷ ಕೋಟಿಗಳಲ್ಲಿ)
₹ 37.37:
ಮೇ ಅಂತ್ಯಕ್ಕೆ
₹ 38.89:ಏಪ್ರಿಲ್‌ ಅಂತ್ಯಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT