ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಕ್ವಿಟಿ ಎಂಎಫ್‌: ಜನವರಿಯಲ್ಲಿ ₹14,888 ಕೋಟಿ ಒಳಹರಿವು

Last Updated 9 ಫೆಬ್ರುವರಿ 2022, 12:52 IST
ಅಕ್ಷರ ಗಾತ್ರ

ನವದೆಹಲಿ: ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳು ಜನವರಿಯಲ್ಲಿ ₹ 14,888 ಕೋಟಿ ಬಂಡವಾಳ ಆಕರ್ಷಿಸಿವೆ. ಈ ಮೂಲಕ ಸತತ 11ನೇ ತಿಂಗಳಿನಲ್ಲಿಯೂ ಬಂಡವಾಳ ಒಳಹರಿವು ಆದಂತಾಗಿದೆ.

ಆದರೆ, 2021ರ ಡಿಸೆಂಬರ್‌ನಲ್ಲಿ ಬಂದಿದ್ದ ₹ 25,077 ಕೋಟಿ ಬಂಡವಾಳಕ್ಕೆ ಹೋಲಿಸಿದರೆ ಜನವರಿಯಲ್ಲಿ ಆಗಿರುವ ಹೂಡಿಕೆಯು ಕಡಿಮೆ ಎಂದು ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಬುಧವಾರ ತಿಳಿಸಿದೆ.

2021ರ ಮಾರ್ಚ್‌ನಿಂದಲೂ ಈಕ್ವಿಟಿ ಯೋಜನೆಗಳಲ್ಲಿ ಬಂಡವಾಳ ಒಳಹರಿವು ಕಂಡುಬರುತ್ತಿದ್ದು, ₹ 1 ಲಕ್ಷ ಕೋಟಿಗೂ ಅಧಿಕ ಮೊತ್ತ ಹೂಡಿಕೆ ಆಗಿದೆ. ಇದಕ್ಕೂ ಮೊದಲು 2020ರ ಜುಲೈನಿಂದ 2021ರ ಫೆಬ್ರುವರಿ ಅವಧಿಯಲ್ಲಿ ₹ 46,791 ಕೋಟಿ ಬಂಡವಾಳ ಹೊರಹೋಗಿತ್ತು.

ಮ್ಯೂಚುವಲ್ ಫಂಡ್‌ ಉದ್ಯಮದಲ್ಲಿ ಜನವರಿಯಲ್ಲಿ ₹ 35,252 ಕೋಟಿ ಹೂಡಿಕೆ ಆಗಿದೆ. ಡಿಸೆಂಬರ್‌ನಲ್ಲಿ ₹ 4,350 ಕೋಟಿ ಬಂಡವಾಳ ಹೊರಹೋಗಿತ್ತು. ಉದ್ಯಮದ ನಿರ್ವಹಣಾ ಸಂಪತ್ತು ಮೌಲ್ಯವು ₹ 37.72 ಲಕ್ಷ ಕೋಟಿಗಳಿಂದ ₹ 38.88 ಲಕ್ಷ ಕೋಟಿಗೆ ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT