ಬೆಂಗಳೂರು: ಮಾಧ್ಯಮ ಸಂಸ್ಥೆ ‘ನ್ಯೂಸ್ ಫಸ್ಟ್’ ಶನಿವಾರದಿಂದ ಸೋಮವಾರದವರೆಗೆ ನಗರದಲ್ಲಿ ‘ಇ.ವಿ.ರೆಡಿ’ ಹೆಸರಿನ ವಿದ್ಯುತ್ ಚಾಲಿತ ವಾಹನಗಳ ಮೇಳವನ್ನು ಆಯೋಜಿಸಿದೆ.

ಇದು ಅರಮನೆ ಮೈದಾನದ ‘ತ್ರಿಪುರ ವಾಸಿನಿ’ಯಲ್ಲಿ ನಡೆಯಲಿದೆ. ಸಾರ್ವಜನಿಕರಿಗೆ ಪ್ರವೇಶ ಮುಕ್ತವಾಗಿ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯದ ನೆರವು ಇದೆ.

ದೇಶದ ಹಾಗೂ ವಿದೇಶಗಳ ಮುಂಚೂಣಿ ಇ.ವಿ. ಬ್ರ್ಯಾಂಡ್ಗಳು, ನೀತಿ ನಿರೂಪಕರು, ಉದ್ಯಮದ ಪ್ರಮುಖರು, ಗ್ರಾಹಕರು ಒಂದೆಡೆ ಸೇರುವ ಸಮಾವೇಶ ಇದು. ಟಾಟಾ ಇ.ವಿ., ಟಾಟಾ ಮೋಟರ್ಸ್ ಕಮರ್ಷಿಯಲ್ ವೆಹಿಕಲ್ಸ್, ಮಹೀಂದ್ರ ಎಲೆಕ್ಟ್ರಿಕ್ ಆಟೊಮೊಬೈಲ್ ಲಿಮಿಟೆಡ್, ಅಶೋಕ್ ಲೇಲ್ಯಾಂಡ್, ಸ್ವಿಚ್ ಮೊಬಿಲಿಟಿ, ಕಿಯಾ ಇಂಡಿಯಾ, ಮೋರಿಸ್ ಗರಾಜಸ್, ಏಥರ್, ಟಿವಿಎಸ್ ಮೋಟರ್ ಕಂಪನಿ, ವಿಡಾ (ಹೀರೊ) ಸೇರಿ ಹಲವು ಕಂಪನಿಗಳು ಭಾಗವಹಿಸುತ್ತಿವೆ.

ಇ.ವಿ. ಕುರಿತ ಅಪನಂಬಿಕೆಗಳು ಹಾಗೂ ವಾಸ್ತವಗಳ ಬಗ್ಗೆ ಒಂದು ಗೋಷ್ಠಿ ನಡೆಯಲಿದೆ. ಇದು ಬ್ಯಾಟರಿ ಬಾಳಿಕೆ, ಸುರಕ್ಷತೆ, ವಾಹನಗಳ ಮರುಮಾರಾಟ ಮೌಲ್ಯ, ಮಾಲೀಕತ್ವದ ವೆಚ್ಚ ಕುರಿತಾಗಿನ ಕಳವಳಗಳನ್ನು ಪರಿಹರಿಸುವ ಯತ್ನ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.