ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ಫೊಸಿಸ್ ಮಾಜಿ ಅಧ್ಯಕ್ಷ ಮೋಹಿತ್ ಜೋಶಿ ಇನ್ನುಮುಂದೆ ಟೆಕ್ ಮಹಿಂದ್ರಾ ಎಂಡಿ, ಸಿಇಒ

Last Updated 11 ಮಾರ್ಚ್ 2023, 10:00 IST
ಅಕ್ಷರ ಗಾತ್ರ

ನವದೆಹಲಿ: ಇನ್ಫೊಸಿಸ್‌ ಮಾಜಿ ಅಧ್ಯಕ್ಷ ಮೋಹಿತ್ ಜೋಶಿ ಅವರು ಇದೀಗ 'ಟೆಕ್‌ ಮಹಿಂದ್ರಾ' ಕಂಪನಿಯ ನೂತನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ (ಸಿಇಒ) ನೇಮಕಗೊಂಡಿದ್ದಾರೆ.

'ಟೆಕ್‌ ಮಹಿಂದ್ರಾ' ಶನಿವಾರ ಈ ಮಾಹಿತಿ ಪ್ರಕಟಿಸಿದ್ದು, ಜೋಶಿ ಅವರು ಸದ್ಯ ಎಂ.ಡಿ ಹಾಗೂ ಸಿಇಒ ಆಗಿರುವ ಸಿ.ಪಿ. ಗುರ್ನಾನಿ ಅವರ ನಿವೃತ್ತಿ ಬಳಿಕ ಹುದ್ದೆಯ ಹೊಣೆ ಹೊತ್ತುಕೊಳ್ಳಲಿದ್ದಾರೆ ಎಂದು ತಿಳಿಸಿದೆ.

ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿ ಇನ್ಫೊಸಿಸ್‌ಗೆ ಜೋಶಿ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಪ್ರಕಟಣೆ ಹೊರಬಿದ್ದಿದೆ.

'ಸಿ.ಪಿ. ಗುರ್ನಾನಿ ಅವರು 2023ರ ಡಿಸೆಂಬರ್‌ 19ರಂದು ನಿವೃತ್ತರಾದ ಬಳಿಕ ಮೋಹಿತ್‌ ಅವರು ಎಂ.ಡಿ ಹಾಗೂ ಸಿಇಒ ಹುದ್ದೆಗಳನ್ನು ನಿಭಾಯಿಸಲಿದ್ದಾರೆ. ಹೊಂದಾಣಿಕೆಯ ಸಲುವಾಗಿ ಅವರು ಅದಕ್ಕೂ ಮುನ್ನವೇ ಕಂಪನಿಯನ್ನು ಕೂಡಿಕೊಳ್ಳಲಿದ್ದಾರೆ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಂಪನಿಗೆ ರಾಜೀನಾಮೆ ನೀಡಿರುವ ಜೋಶಿ ಅವರು ಇಂದಿನಿಂದ (ಮಾರ್ಚ್‌ 11ರಿಂದ) ರಜೆಯಲ್ಲಿದ್ದಾರೆ. 2023ರ ಜೂನ್‌ 9 ಕಂಪನಿಯಲ್ಲಿ ಅವರ ಕೊನೆಯ ದಿನವಾಗಿದೆ ಎಂದು ಇನ್ಫೊಸಿಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT