ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಪ್ರಿಲ್‌ನಲ್ಲಿ ರಫ್ತು ಶೇ 24ರಷ್ಟು ಹೆಚ್ಚಳ

Last Updated 3 ಮೇ 2022, 16:29 IST
ಅಕ್ಷರ ಗಾತ್ರ

ನವದೆಹಲಿ: ಏಪ್ರಿಲ್‌ ತಿಂಗಳಿನಲ್ಲಿ ದೇಶದ ರಫ್ತು ಪ್ರಮಾಣವು ಶೇಕಡ 24.22ರಷ್ಟು ಹೆಚ್ಚಾಗಿದ್ದು, ಮೊತ್ತವು ₹ 2.92 ಲಕ್ಷ ಕೋಟಿಗೆ ತಲುಪಿದೆ. ಪೆಟ್ರೋಲಿಯಂ ಉತ್ಪನ್ನಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು ಮತ್ತು ರಾಸಾಯನಿಕಗಳ ರಫ್ತು ಉತ್ತಮ ಮಟ್ಟದಲ್ಲಿ ಆಗಿದ್ದು ಇದಕ್ಕೆ ಕಾರಣ.

ಏಪ್ರಿಲ್‌ನಲ್ಲಿ ವ್ಯಾಪಾರ ಕೊರತೆ ಅಂತರವು ₹ 1.53 ಲಕ್ಷ ಕೋಟಿಗೆ ಏರಿಕೆ ಆಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ. ಏಪ್ರಿಲ್‌ನಲ್ಲಿ ಆಮದು ಪ್ರಮಾಣವು ಶೇ 26.55ರಷ್ಟು ಹೆಚ್ಚಳ ಆಗಿದ್ದು, ₹ 4.46 ಲಕ್ಷ ಕೊಟಿಗೆ ತಲುಪಿದೆ. 2021ರ ಏಪ್ರಿಲ್‌ನಲ್ಲಿ ವ್ಯಾಪಾರ ಕೊರತೆ ಅಂತರವು ₹ 1.16 ಲಕ್ಷ ಕೋಟಿ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT