ಭಾನುವಾರ, ಮೇ 16, 2021
23 °C
ಕೋವಿಡ್‌ ಪ್ರಕರಣಗಳ ಹೆಚ್ಚಳದ ಪರಿಣಾಮ

ಏಪ್ರಿಲ್‌ನಲ್ಲಿ ತಯಾರಿಕಾ ಚಟುವಟಿಕೆ ಅತ್ಯಲ್ಪ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ದೇಶದಲ್ಲಿ ಕೋವಿಡ್‌ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿವೆ. ಹೀಗಾಗಿ ಬೇಡಿಕೆ ಮತ್ತು ತಯಾರಿಕೆಯ ಪ್ರಮಾಣವು ಎಂಟು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದರಿಂದಾಗಿ ಏಪ್ರಿಲ್‌ನಲ್ಲಿ ತಯಾರಿಕಾ ವಲಯದ ಚಟುವಟಿಕೆಯು ಅತ್ಯಲ್ಪ ಬೆಳವಣಿಗೆ ಕಂಡಿದೆ’ ಎಂದು ಐಎಚ್ಎಸ್‌ ಮರ್ಕಿಟ್‌ ಸಂಸ್ಥೆ ಹೇಳಿದೆ.

ಐಎಚ್ಎಸ್‌ ಮರ್ಕಿಟ್‌ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ಮಾರ್ಚ್‌ನಲ್ಲಿ 55.4ರಷ್ಟಿತ್ತು. ಇದು ಏಪ್ರಿಲ್‌ನಲ್ಲಿ 55.5ಕ್ಕೆ ಏರಿಕೆ ಕಂಡಿದೆ.

ಜಾಗತಿಕ ಮಟ್ಟದಲ್ಲಿ ವಸ್ತುಗಳ ಬೆಲೆಯಲ್ಲಿ ಆಗಿರುವ ಏರಿಕೆಯ ಪರಿಣಾಮವನ್ನು ಕಂಪನಿಗಳು ಈಗಾಗಲೇ ಎದುರಿಸುತ್ತಿವೆ. ಇದೀಗ ಕೋವಿಡ್‌ ಪ್ರಕರಣಗಳ ಹೆಚ್ಚಳವು ಬೇಡಿಕೆಯನ್ನು ಇನ್ನಷ್ಟು ತಗ್ಗುವಂತೆ ಮಾಡಬಹುದು ಎಂದು ಐಎಚ್‌ಎಸ್‌ ಮರ್ಕಿಟ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನಾ ಡಿ. ಲಿಮಾ ಹೇಳಿದ್ದಾರೆ.

ಏಪ್ರಿಲ್‌ನಲ್ಲಿ ತಯಾರಿಕಾ ವೆಚ್ಚವು ಏಳು ವರ್ಷಗಳಲ್ಲಿಯೇ ಭಾರಿ ಏರಿಕೆ ಕಂಡಿದೆ. ಮುಂಬರುವ ತಿಂಗಳುಗಳಲ್ಲಿ ಬೆಳವಣಿಗೆ ಹೇಗಿರಲಿದೆ ಎನ್ನುವುದು ಮುಖ್ಯವಾಗಲಿದೆ. ಏಕೆಂದರೆ ಬೇಡಿಕೆ ಬರದೇ ಇದ್ದರೆ ತಯಾರಕರಿಗೆ ವೆಚ್ಚದ ಹೊರೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಅವರು ತಿಳಿಸಿದ್ದಾರೆ.

ರಫ್ತು ವಹಿವಾಟು ಎಂಟನೇ ತಿಂಗಳಿನಲ್ಲಿಯೂ ಏರಿಕೆ ಕಂಡಿದೆ. ಏಪ್ರಿಲ್‌ನಲ್ಲಿ ಆಗಿರುವ ರಫ್ತು ವಹಿವಾಟಿನ ದರವು 2020ರ ಅಕ್ಟೋಬರ್‌ ಬಳಿಕ ಅತ್ಯಂತ ವೇಗದ್ದಾಗಿದೆ. ಭಾರತದ ಸರಕುಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ಸಂಸ್ಥೆಯು ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು