ಶುಕ್ರವಾರ, ಆಗಸ್ಟ್ 12, 2022
20 °C

ಫಾಸ್ಟ್ರ್ಯಾಕ್‌: ಅತ್ಯಂತ ತೆಳುವಾದ ಸ್ಮಾರ್ಟ್‌ ಬ್ಯಾಂಡ್‌ ರಿಫ್ಲೆಕ್ಸ್‌ ವೇವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಫಾಸ್ಟ್ರ್ಯಾಕ್‌ ಕಂಪನಿಯು ವಿಶ್ವದಲ್ಲಿಯೇ ಅತಿ ತೆಳುವಾದ (9 ಎಂಎಂ) ಸ್ಮಾರ್ಟ್‌ ಬ್ಯಾಂಡ್‌ ‘ರಿಫ್ಲೆಕ್ಸ್‌ ವೇವ್‌’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಸಾಧನವು ಗೆಸ್ಚರ್‌ ಕಂಟ್ರೋಲ್‌ ಮೂಲಕ ಕಾರ್ಯನಿರ್ವಹಿಸುತ್ತದೆ. ಬೆಲೆ ₹ 4,995. ಮೊಬೈಲ್‌ ಜತೆ ಸಂಪರ್ಕಿಸಿದರೆ, ಕರೆ ನಿರಾಕರಿಸಲು, ಸೆಲ್ಫಿ ತೆಗೆಯಲು, ನೋಟಿಫಿಕೇಷನ್‌ ಓದಲು ಹಾಗೂ ಮ್ಯೂಸಿಕ್‌ ಅನ್ನು ಫಾರ್ವರ್ಡ್‌ ಅಥವಾ ಬ್ಯಾಕ್ವರ್ಡ್‌ ಮಾಡುವ ವಿಶಿಷ್ಟ ಆಯ್ಕೆಗಳನ್ನು ಒಳಗೊಂಡಿದೆ.

‘ಕೈಯನ್ನು ಬಲಕ್ಕೆ ತಿರುಗಿಸಿದರೆ ಹಾಡು ಫಾರ್ವರ್ಡ್‌ ಆಗುತ್ತದೆ. ಎಡಕ್ಕೆ ತಿರುಗಿಸಿದರೆ ಬ್ಯಾಕ್ವರ್ಡ್‌ ಆಗುತ್ತದೆ. ಇದಲ್ಲದೆ, 24 ಗಂಟೆಯವರೆಗೆ ನಿದ್ರೆ ಯ ಮೇಲೆ ನಿಗಾ ಇರಿಸುವ, ಕ್ಯಾಲೆಂಡರ್‌ ಅಲರ್ಟ್ಸ್ ನೀಡುವ ಆಯ್ಕೆಗಳೂ ಇದರಲ್ಲಿವೆ. ಇದರ ಬ್ಯಾಟರಿ ಐದು ದಿನಗಳವರೆಗೆ ಬಾಳಿಕೆ ಬರುತ್ತದೆ’ ಎಂದು ಟೈಟಾನ್‌ ಕಂಪನಿಯ ಸಿಇಒ ಎಸ್‌. ರವಿಕಾಂತ್‌ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು