ಶನಿವಾರ, ಜನವರಿ 18, 2020
19 °C
ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಸೆಪ್ಟೆಂಬರ್‌ ಅವಧಿ

ಎಫ್‌ಡಿಐ ಒಳಹರಿವು ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಈ ಹಣಕಾಸು ವರ್ಷದ ಏಪ್ರಿಲ್‌–ಸೆಪ್ಟೆಂಬರ್‌ ಅವಧಿಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ₹ 1.87 ಲಕ್ಷ ಕೋಟಿಗಳಷ್ಟಾಗಿದೆ. 

2018–19ನೇ ಹಣಕಾಸು ವರ್ಷದ ಇದೇ ಅವಧಿಯಲ್ಲಿನ ಎಫ್‌ಡಿಐ ಒಳಹರಿವು ₹ 1.63 ಲಕ್ಷ ಕೋಟಿಗಳಷ್ಟಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಶೇ 15ರಷ್ಟು ಏರಿಕೆಯಾಗಿದೆ. ಸೇವೆ, ಕಂಪ್ಯೂಟರ್‌ ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌, ನಿರ್ಮಾಣ, ವ್ಯಾಪಾರ, ಆಟೊಮೊಬೈಲ್‌, ಔಷಧ, ರಾಸಾಯನಿಕ ಮತ್ತು ವಿದ್ಯುತ್‌ ವಲಯಗಳಲ್ಲಿ ಹೆಚ್ಚು ಹೂಡಿಕೆಯಾಗಿದೆ.

‘ಆರ್ಥಿಕತೆಯು ಮಂದಗತಿಯಲ್ಲಿ ಸಾಗುತ್ತಿದ್ದರೂ ಎಫ್‌ಡಿಐ ಒಳಹರಿವಿನ ಮೇಲೆ ಪರಿಣಾಮ ಬೀರಿಲ್ಲ’ ಎಂದು ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆಯ (ಡಿಪಿಐಐಟಿ) ಕಾರ್ಯದರ್ಶಿ ಗುರುಪ್ರಸಾದ್‌ ಮಹಾಪಾತ್ರಾ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು