ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 21 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಮಹದೇವಪ್ಪ, ಶಿಕ್ಷಕ, ಮಳವಳ್ಳಿ

l ನೀವು ಪ್ರತಿ ಬುಧವಾರ ಕೊಡುವ ಸಲಹೆ ನಮಗೆ ತುಂಬಾ ಅನುಕೂಲವಾಗಿದೆ. ಇವುಗಳಲ್ಲಿ ಸಿಂಡ್‌ ಆರೋಗ್ಯ ಕೂಡಾ ಒಂದು. ಬೇರೆಲ್ಲಾ ಆರೋಗ್ಯ ವಿಮಾ ಕಂಪನಿಗಳು ಆರೋಗ್ಯ ವಿಮೆ ಇಳಿಸುವಾಗ ನನ್ನ ಕುಟುಂಬದ ಜತೆ ನನ್ನ ತಾಯಿಯ ವಿಮೆ ನಿರಾಕರಿಸಿದಾಗ ಸಿಂಡ್‌ ಆರೋಗ್ಯ ನನ್ನ ಕೈ ಸೇರಿತು. ಕಳೆದೆರಡು ವರ್ಷಗಳಲ್ಲಿ ಈ ಯೋಜನೆಯಿಂದ ನಾನು ಪ್ರಯೋಜನ ಪಡೆದಿರುವೆ. ನಾವು ಸದಾ ನಿಮ್ಮನ್ನು ನೆನಪಿಸಿಕೊಳ್ಳುತ್ತೇವೆ. ಈಗ ಸಿಂಡಿಕೇಟ್‌ ಬ್ಯಾಂಕ್‌ ಕೆನರಾದೊಂದಿಗೆ ವಿಲೀನವಾಗಿದ್ದು, ಈ ಪಾಲಿಸಿ ಮುಂದುವರಿಸುವ ವಿಚಾರದಲ್ಲಿ ಮಾರ್ಗದರ್ಶನ ನೀಡಿ.

ಉತ್ತರ: ಸಿಂಡಿಕೇಟ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌ನೊಂದಿಗೆ ಇದೇ ಏಪ್ರಿಲ್‌ನಿಂದ ವಿಲೀನವಾಗಿದ್ದು, ಈಗಾಗಲೇ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಸಿಂಡ್‌ ಆರೋಗ್ಯ ಪಾಲಿಸಿ ಹೊಂದಿದವರು ಅಂತಹ ಪಾಲಿಸಿ ಅವಧಿ ಮುಗಿಯುವ ಮುನ್ನ ನವೀಕರಿಸಿದ್ದರೆ, ಹಾಗೂ ಮುಂದೆ ಅವಧಿ ಮುಗಿಯುವ ಮುನ್ನ ನವೀಕರಿಸಿದರೆ ಅಂತಹ ಎಲ್ಲಾ ಪಾಲಿಸಿದಾರರೂ ಕೆನರಾ ಬ್ಯಾಂಕ್‌ CAN AROGYA ಯೋಜನೆಯಲ್ಲಿ ಮುಂದುವರಿಯಲು ಕೆನರಾ ಬ್ಯಾಂಕ್‌ ಈಗಾಗಲೇ ಅನುಮತಿ ನೀಡಿ ಸುತ್ತೋಲೆ ಕಳಿಸಿದೆ. ಇದೇ ವೇಳೆ ಸಿಂಡ್‌ ಆರೋಗ್ಯ ಪಾಲಿಸಿಯಲ್ಲಿ ನಮೂದಿಸಿದ ಎಲ್ಲಾ ಸೌಲಭ್ಯಗಳು (continuity benefits) ಕೆನರಾ ಬ್ಯಾಂಕ್‌ can arogya ದಲ್ಲಿ ಏನೂ ವ್ಯತ್ಯಾಸಗಳಿಲ್ಲದೆ ಗ್ರಾಹಕರು continuity benefits ಪಡೆಯಲು ಪಾಲಿಸಿ ನಕಲು ಕೊಡಬೇಕಾಗುತ್ತದೆ. ನಿಮ್ಮ ಅಭಿಮಾನಕ್ಕೆ ವಂದನೆಗಳು. ನಿಮ್ಮ ಪ್ರಶ್ನೆಯಿಂದ ಸಿಂಡ್‌ ಆರೋಗ್ಯ ಪಾಲಿಸಿ ಹೊಂದಿದ ಎಲ್ಲಾ ಗ್ರಾಹಕರಿಗೂ ಉತ್ತರ ಸಿಕ್ಕಿದಂತಾಗಿದೆ.

***

ಗುರುಪ್ರಸಾದ್‌ ಬೆಳವಾಡಿ, ಕಲ್ಲಳ್ಳಿ, ಮಂಡ್ಯ

l ನಾನು ಮ್ಯೂಚುವಲ್‌ ಫಂಡ್‌ಗಳ ‘ಸಿಪ್‌’ನಲ್ಲಿ ‌ಆರು ವರ್ಷಗಳಿಂದ ಪ್ರತಿ ತಿಂಗಳೂ ₹ 2 ಸಾವಿರದಂತೆ ಹಣ ತೊಡಗಿಸುತ್ತಿದ್ದೇನೆ. ಪ್ರಸ್ತುತ ಷೇರು ಮಾರುಕಟ್ಟೆ ಕುಸಿತದಿಂದಾಗಿ ನನ್ನ ಹೂಡಿಕೆಯಲ್ಲಿ ₹ 22 ಸಾವಿರ ನಷ್ಟವಾಗಿದೆ. ಮಾರುಕಟ್ಟೆ ಕುಸಿತಕ್ಕೆ ಮೊದಲು ₹ 5 ಸಾವಿರ ಲಾಭದಲ್ಲಿ ಇತ್ತು. ನನಗೆ ಮುಂದೇನು ಮಾಡಬೇಕೆಂದು ತಿಳಿಯುತ್ತಿಲ್ಲ. ದಯಮಾಡಿ ಮಾರ್ಗದರ್ಶನ ಮಾಡಿ.

ಉತ್ತರ: ಬ್ಯಾಂಕ್‌ ಹಾಗೂ ಅಂಚೆ ಕಚೇರಿ ಠೇವಣಿಗಳಲ್ಲಿ ಬಡ್ಡಿದರ ಅಷ್ಟೊಂದು ಆಕರ್ಷಣೀಯವಲ್ಲವಾದರೂ ಈ ಹೂಡಿಕೆಗಳಲ್ಲಿ ನಿಖರವಾದ ವರಮಾನ ಬಡ್ಡಿ ಬರುತ್ತದೆ. ಇದೇ ವೇಳೆ mutual fund investment is subject to market risk ಎನ್ನುವ ಎಚ್ಚರಿಕೆ ಸಂದೇಶವನ್ನು ಹೂಡಿಕೆದಾರರು ಗಮನಿಸದಿರುವುದು ಸೂಜಿಗ. ನಿಮ್ಮ ಉದಾಹರಣೆಯಲ್ಲಿ ₹ 2 ಸಾವಿರ ಸಿಪ್‌ ಬದಲಾಗಿ ಆರ್‌.ಡಿ ಮಾಡಿದ್ದರೆ ಶೇ 8ರ ಬಡ್ಡಿದರಲ್ಲಿ(ಆರು ವರ್ಷಗಳ ಹಿಂದೆ ಶೇ 8 ಬಡ್ಡಿದರವಿತ್ತು.) ಇಂದು ಅಸಲು ಬಡ್ಡಿ ಸೇರಿಸಿ ₹ 1,84,960 ನಿಮ್ಮ ಕೈಸೇರುತ್ತಿತ್ತು. ಇದರಲ್ಲಿ ನೀವು ಕಟ್ಟಿದ ₹ 1,44,000 ಕಳೆದರೂ ₹ 40,960 ಬಡ್ಡಿ ರೂಪದಲ್ಲಿ ಲಾಭ ಬರುತ್ತಿತ್ತು. ಷೇರು ಮಾರುಕಟ್ಟೆ ಕುಸಿತಕ್ಕೆ ಮುನ್ನ ಕೂಡಾ ನಿಮ್ಮ ಹೂಡಿಕೆಯಲ್ಲಿ ಬಂದಿರುವ ಲಾಭ ಕೇವಲ ₹ 5 ಸಾವಿರ. ನೀವು ₹ 22 ಸಾವಿರ ನಷ್ಟಕ್ಕೊಳಗಾಗಿರುವುದು ನನಗೆ ತುಂಬಾ ನೋವು ತಂದಿದೆ. ಮುಂದಾದರೂ ಜಾಗರೂಕರಾಗಿರಿ. ಎಂಎಫ್‌ ಸಿಪ್‌ ತಕ್ಷಣ ನಿಲ್ಲಿಸಬೇಡಿ. ಸ್ವಲ್ಪ ಸಮಯ ಕಾಯಿರಿ.

***

ತಿದ್ದುಪಡಿ: ಶರಣಪ್ಪ ವಿಜಯಪುರ.

ಇತ್ತೀಚಿನ ಕಾನೂನಿನಂತೆ ಬಿಡಿಎಯಿಂದ ಪಡೆದ ನಿವೇಶನ ಕುಟುಂಬದ ಸದಸ್ಯರೊಳಗೂ 10 ವರ್ಷಗಳ ತನಕ gift deed ಮುಖಾಂತರ ವರ್ಗಾಯಿಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT