ಬೆಂಗಳೂರು: ಗೇಮ್ಸ್ 24x7 ಸಂಸ್ಥೆಯು ತನ್ನ ಟೆಕ್ಎಕ್ಸ್ಪೆಡಿಟ್ ಆಕ್ಸಲರೇಟರ್ ಕಾರ್ಯಕ್ರಮಕ್ಕಾಗಿ ರಾಜ್ಯದ ಆರು ನವೋದ್ಯಮಗಳು ಸೇರಿ ಒಟ್ಟು 17 ನವೋದ್ಯಮಗಳನ್ನು ಆಯ್ಕೆ ಮಾಡಿದೆ. ಇವುಗಳಿಗೆ ಸಂಸ್ಥೆಯು ಅಗತ್ಯ ನೆರವು ಕಲ್ಪಿಸಲಿದೆ.

ಬೆಂಗಳೂರಿನಲ್ಲಿ ಕಳೆದ ವರ್ಷದ ಅಕ್ಟೋಬರ್ನಲ್ಲಿ ಟೆಕ್ಎಕ್ಸ್ಪೆಡಿಟ್ ಕಾರ್ಯಕ್ರಮ ಪ್ರಾರಂಭಿಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಗೇಮಿಂಗ್, ಕೃತಕ ಬುದ್ಧಿಮತ್ತೆ ಮತ್ತು ಅಂತರ್ಗತ ತಂತ್ರಜ್ಞಾನ ಎಂಬ ಮೂರು ವಿಭಾಗದಲ್ಲಿ ಕಾರ್ಯ ನಿರ್ವಹಿಸುವ 330ಕ್ಕೂ ಹೆಚ್ಚು ನವೋದ್ಯಮಗಳು ಆರ್ಥಿಕ ನೆರವಿಗಾಗಿ ಈ ಕಾರ್ಯಕ್ರಮದಡಿ ಅರ್ಜಿ ಸಲ್ಲಿಸಿದ್ದವು.

ಎ.ಐ ವಿಭಾಗದಲ್ಲಿ ರಾಜ್ಯದ ಆರ್ಫಿಕಸ್, ಕೈರೋವಿಷನ್, ಚಿಟ್ಟೂ ಡಾಟ್ ಕಾಮ್, ನೋಹಾ ಡಾಟ್ ಎ.ಐ, ಸ್ಪೋಡಾ ಮತ್ತು ಝೀರೊನ್ ಡಾಟ್ ಎ.ಐ ಎಂಬ ನವೋದ್ಯಮಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿವೆ. ಆಯ್ಕೆಯಾಗಿರುವ ಈ ನವೋದ್ಯಮಗಳಿಗೆ ಉದ್ಯಮದ ಮುಖ್ಯಸ್ಥರು, ವೆಂಚರ್ ಕ್ಯಾಪಿಟಲಿಸ್ಟ್ ಮತ್ತು ತಜ್ಞರೊಂದಿಗೆ ಮಾತುಕತೆ ನಡೆಸುವ ಅವಕಾಶ ದೊರೆಯಲಿದೆ.

‘ಟೆಕ್ಎಕ್ಸ್ಪೆಡಿಟ್ನಂತಹ ಮಹತ್ವದ ಕಾರ್ಯಕ್ರಮಕ್ಕೆ ರಾಜ್ಯದ ನವೋದ್ಯಮಗಳು ಆಯ್ಕೆಯಾಗಿರುವುದು ಸಂತಸ ತಂದಿದೆ. ನವೋದ್ಯಮ ವಲಯದಲ್ಲಿ ರಾಜ್ಯ ಹೊಂದಿರುವ ಸಾಮರ್ಥ್ಯಕ್ಕೆ ಇದು ಸಾಕ್ಷಿಯಾಗಿದೆ’ ಎಂದು ಎಲೆಕ್ಟ್ರಾನಿಕ್ಸ್, ಐ.ಟಿ–ಬಿ.ಟಿ ಇಲಾಖೆಯ ಕಾರ್ಯದರ್ಶಿ ಏಕರೂಪ್ ಕೌರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.