ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿ ಏಜೆಂಟರ ಗ್ರ್ಯಾಚ್ಯುಟಿ ಮಿತಿ ಏರಿಕೆ

Published 19 ಸೆಪ್ಟೆಂಬರ್ 2023, 13:54 IST
Last Updated 19 ಸೆಪ್ಟೆಂಬರ್ 2023, 13:54 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ನೌಕರರು ಹಾಗೂ ಏಜೆಂಟರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಹಣಕಾಸು ಸಚಿವಾಲಯವು ಸೋಮವಾರ ಹಲವು ಕ್ರಮಗಳಿಗೆ ಅನುಮೋದನೆ ನೀಡಿದೆ. ಗ್ರ್ಯಾಚ್ಯುಟಿ ಹಾಗೂ ಕುಟುಂಬ ಪಿಂಚಣಿ ಮಿತಿ ಹೆಚ್ಚಳ ಕೂಡ ಈ ಕ್ರಮಗಳಲ್ಲಿ ಸೇರಿದೆ.

ಎಲ್‌ಐಸಿ ಏಜೆಂಟರ ಗ್ರ್ಯಾಚ್ಯುಟಿ ಮಿತಿಯನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಹೆಚ್ಚು ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ. ಮರುನೇಮಕ ಆಗಿರುವ ಏಜೆಂಟರು ನವೀಕರಣ ಕಮಿಷನ್‌ ಪಡೆಯಲು ಅರ್ಹರು ಎಂಬ ನಿಯಮ ಜಾರಿಗೆ ತರಲಾಗಿದೆ. ಇದರಿಂದ ಅವರ ಹಣಕಾಸಿನ ಸ್ಥಿರತೆ ಹೆಚ್ಚಲಿದೆ ಎಂದು ಸಚಿವಾಲಯ ಹೇಳಿದೆ.

ಏಜೆಂಟರಿಗೆ ಅನ್ವಯವಾಗುವ ಅವಧಿ ವಿಮೆಯನ್ನು ಈಗಿನ ₹3,000–10,000ದ ಮಿತಿಯಿಂದ ₹25,000–1,50,000ಕ್ಕೆ ಹೆಚ್ಚು ಮಾಡಲಾಗಿದೆ. ಇದರ ಪರಿಣಾಮವಾಗಿ, ಮೃತ ಏಜೆಂಟರ ಕುಟುಂಬದ ಸದಸ್ಯರಿಗೆ ಹೆಚ್ಚಿನ ನೆರವು ಸಿಗಲಿದೆ.

ಎಲ್‌ಐಸಿ ನೌಕರರಿಗೆ ಅನ್ವಯವಾಗುವಂತೆ, ಕುಟುಂಬ ಪಿಂಚಣಿಯನ್ನು ಎಲ್ಲರಿಗೂ ಶೇ 30ರ ದರಕ್ಕೆ ನಿಗದಿ ಮಾಡಲಾಗಿದೆ. ಎಲ್‌ಐಸಿ 13 ಲಕ್ಷಕ್ಕೂ ಹೆಚ್ಚಿನ ಏಜೆಂಟರನ್ನು, 1 ಲಕ್ಷಕ್ಕೂ ಹೆಚ್ಚಿನ ನೌಕರರನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT