ಶನಿವಾರ, ಸೆಪ್ಟೆಂಬರ್ 18, 2021
28 °C

ಪಿ.ಎಫ್. ತೆರಿಗೆ: ನಿಯಮ ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವಾಲಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿಗೆ (ಪಿ.ಎಫ್) ನೌಕರರ ಕಡೆಯಿಂದ ಜಮಾ ಆಗುವ ವಾರ್ಷಿಕ ₹ 2.5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಮೇಲಿನ ಬಡ್ಡಿಗೆ ತೆರಿಗೆ ಲೆಕ್ಕ ಹೇಗೆ ಎಂಬ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯವು ನಿಯಮಗಳನ್ನು ಪ್ರಕಟಿಸಿದೆ.

2021–22ನೇ ಸಾಲಿನ ಬಜೆಟ್‌ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಪಿ.ಎಫ್.ನಲ್ಲಿ ತೆರಿಗೆಯಿಂದ ವಿನಾಯಿತಿ ಇರುವ ಬಡ್ಡಿಗೆ ಮಿತಿ ಹಾಕುವುದಾಗಿ ಹೇಳಿದ್ದರು. ತೆರಿಗೆ ವ್ಯಾಪ್ತಿಗೆ ಬರುವ ಬಡ್ಡಿ ಲೆಕ್ಕಹಾಕುವುದು ಹೇಗೆ ಎಂಬ ಬಗ್ಗೆ ಕೇಂದ್ರ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ಬುಧವಾರ ನಿಯಮಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದೆ.

ತೆರಿಗೆ ಲೆಕ್ಕಹಾಕುವ ಉದ್ದೇಶಕ್ಕೆ ಪಿ.ಎಫ್. ಖಾತೆಯಲ್ಲಿ ಪ್ರತ್ಯೇಕ ಖಾತೆಯೊಂದನ್ನು ಮಾಡಿ, ನೌಕರರ ಕಡೆಯಿಂದ ಬರುವ ತೆರಿಗೆ ವ್ಯಾಪ್ತಿಗೆ ಒಳಪಡುವ ಹಾಗೂ ತೆರಿಗೆ ವ್ಯಾಪ್ತಿಗೆ ಒಳಪಡದ ಕೊಡುಗೆ ಮೊತ್ತವನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕು ಎಂದು ನಿಯಮಗಳಲ್ಲಿ ಹೇಳಲಾಗಿದೆ.

ಕಂಪನಿಗಳ ಕಡೆಯಿಂದ ಪಿ.ಎಫ್. ಖಾತೆಗೆ ಹಣ ಜಮಾ ಆಗುತ್ತಿದ್ದರೆ, ಅಂತಹ ಕಂಪನಿಗಳ ನೌಕರರ ₹ 2.5 ಲಕ್ಷದವರೆಗಿನ ಮೊತ್ತದ ಮೇಲಿನ ಬಡ್ಡಿಗೆ ತೆರಿಗೆ ಇಲ್ಲ. ನೌಕರಿ ನೀಡಿದವರಿಂದ ಪಿ.ಎಫ್. ಖಾತೆಗೆ ಹಣ ಜಮಾ ಆಗುತ್ತಿಲ್ಲವಾದರೆ, ಅಂತಹ ಕಂಪನಿಗಳ ನೌಕರರ ₹ 5 ಲಕ್ಷದವರೆಗಿನ ಕೊಡುಗೆಯ ಮೇಲಿನ ಬಡ್ಡಿಗೆ ತೆರಿಗೆ ವಿನಾಯಿತಿ ಇರಲಿದೆ ಎಂದು ತೆರಿಗೆ ಸಲಹಾ ಸಂಸ್ಥೆ ನಂಗಿಯಾ ಆ್ಯಂಡ್ ಕಂಪನಿಯ ಪಾಲುದಾರ ಶೈಲೇಶ್ ಕುಮಾರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು