ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥ ವ್ಯವಸ್ಥೆಯ ಬಗ್ಗೆ ಮಾಹಿತಿ: ಮೂಡಿಸ್ ಮನವೊಲಿಕೆಗೆ ಮುಂದಾದ ಕೇಂದ್ರ

Published 12 ಜೂನ್ 2023, 14:30 IST
Last Updated 12 ಜೂನ್ 2023, 14:30 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಬಲಿಷ್ಠ ಅರ್ಥ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಲು ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳು ಅಮೆರಿಕದ ಮೂಡಿಸ್‌ ಇನ್ವೆಸ್ಟರ್ಸ್‌ ಸರ್ವಿಸಸ್‌ ಸಂಸ್ಥೆಯ ಪ್ರತಿನಿಧಿಗಳನ್ನು ಶುಕ್ರವಾರ ಭೇಟಿ ಮಾಡಲಿದ್ದಾರೆ. ದೇಶದ ರೇಟಿಂಗ್‌ಅನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಮೂಡಿಸ್‌ ಪ್ರತಿನಿಧಿಗಳ ಮನವೊಲಿಸುವ ಉದ್ದೇಶವನ್ನು ಅವರು ಹೊಂದಿದ್ದಾರೆ.

ಮೂಡಿಸ್‌ ಸಂಸ್ಥೆಯು ಈಗ ಭಾರತಕ್ಕೆ ‘ಬಿಎಎ3’ ರೇಟಿಂಗ್ ನೀಡಿದೆ. ಇದು ಹೂಡಿಕೆ ದರ್ಜೆಯ ರೇಟಿಂಗ್‌ಗಳಲ್ಲಿ ಅತ್ಯಂತ ಕಡಿಮೆಯದ್ದು. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್, ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಮತ್ತು ಕೆಲವು ಪ್ರಮುಖ ಸಚಿವಾಲಯಗಳ ಹಿರಿಯ ಅಧಿಕಾರಿಗಳು ದೇಶದಲ್ಲಿ ಈಗ ಜಾರಿಯಲ್ಲಿರುವ ಆರ್ಥಿಕ ಸುಧಾರಣೆಗಳು, ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಆದ್ಯತೆ ಮತ್ತು ದೇಶದಲ್ಲಿರುವ ವಿದೇಶಿ ವಿನಿಮಯ ಮೀಸಲಿನ ಬಗ್ಗೆ ವಿವರ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.

ಜಾಗತಿಕವಾಗಿ ಪ್ರಭಾವಿ ರೇಟಿಂಗ್ ಸಂಸ್ಥೆಗಳಾ ಫಿಚ್, ಎಸ್‌ಆ್ಯಂಡ್‌ಪಿ ಮತ್ತು ಮೂಡಿಸ್‌ ಭಾರತಕ್ಕೆ ನೀಡಿರುವ ರೇಟಿಂಗ್, ಹೂಡಿಕೆ ದರ್ಜೆಯಲ್ಲಿ ಅತ್ಯಂತ ಕಡಿಮೆಯದ್ದು. ಹೂಡಿಕೆದಾರರು ಈ ರೇಟಿಂಗ್ ಗಮನಿಸಿ, ದೇಶವು ಸಾಲವನ್ನು ಪಡೆಯಲು ಎಷ್ಟರಮಟ್ಟಿಗೆ ಅರ್ಹ ಎಂಬುದನ್ನು ತೀರ್ಮಾನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT