ನವದೆಹಲಿ: ಕೇಂದ್ರ ಸರ್ಕಾರವು ಇದೇ ಮೊದಲ ಬಾರಿಗೆ ಏಪ್ರಿಲ್ನಿಂದ ನಿರುದ್ಯೋಗ ದರ ಕುರಿತಂತೆ ಮಾಸಿಕವಾರು ಅಂಕಿಅಂಶ ಬಿಡುಗಡೆಗೆ ಮುಂದಾಗಿದೆ.

ಏಪ್ರಿಲ್ನಲ್ಲಿ 15 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯೋಮಾನದವರ ನಿರುದ್ಯೋಗದ ಪ್ರಮಾಣವು ಶೇ 5.1ರಷ್ಟಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದಿಂದ ಗುರುವಾರ ಬಿಡುಗಡೆಯಾಗಿರುವ ವರದಿ ತಿಳಿಸಿದೆ.

ಈ ಪೈಕಿ 15ರಿಂದ 29 ವರ್ಷದೊಳಗಿನವರ ನಿರುದ್ಯೋಗದ ಪ್ರಮಾಣ ಶೇ 13.8ರಷ್ಟಿದೆ. ನಗರ ಪ್ರದೇಶದಲ್ಲಿ ಈ ವಯೋಮಾನದವರ ನಿರುದ್ಯೋಗ ಪ್ರಮಾಣ ಶೇ 17.2ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ 12.3ರಷ್ಟಿದೆ ಎಂದು ತಿಳಿಸಿದೆ.

ಈ ಮೊದಲು ಸರ್ಕಾರವು ತ್ರೈಮಾಸಿಕ ಮತ್ತು ವಾರ್ಷಿಕವಾಗಿ ನಿರುದ್ಯೋಗ ದರದ ಅಂಕಿ ಅಂಶಗಳನ್ನು ಬಿಡುಗಡೆ ಮಾಡುತ್ತಿತ್ತು. ಈ ಮಾಹಿತಿಯ ಅಸ್ಪಷ್ಟ ಚಿತ್ರಣ ನೀಡುತ್ತದೆ ಎಂಬ ದೂರು ಕೇಳಿಬಂದಿದ್ದರಿಂದ ಮಾಸಿಕವಾರು ಬಿಡುಗಡೆಗೆ ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.